Home Article ಕನವರಿಕೆ (ಉಮೇಶ ಮುಂಡಳ್ಳಿಯವರು ಬರೆದ ಕವನ)

ಕನವರಿಕೆ (ಉಮೇಶ ಮುಂಡಳ್ಳಿಯವರು ಬರೆದ ಕವನ)

SHARE

ಕನವರಿಕೆ

ತವರಲ್ಲಿ ಸಿರಿಇಲ್ಲ
ಮನದಲ್ಲಿ ಗೆಲುವಿಲ್ಲ
ನಿಮ್ಮ ಎದೆ ಆಸರೆಯು
ಬಯಸುತ್ತಿದೆ ಮನವು

ಹಾಲುಹಣ್ಣುಗಳೆಲ್ಲ
ರುಚಿಯುಗೆಟ್ಟಿಹುದಿಂದು
ನಿಮ್ಮ ಪ್ರೀತಿ ಸಿಹಿಯೊಂದೆ
ಕಾಯುತ್ತಿದೆ ಮನವು

ಯಾರ ಆರೈಕೆ ಬೇಕಿಲ್ಲ
ನನಗಿಂದು
ನಿಮ್ಮ ತೋಳಲಿ ಸೇರಿ
ಬಂಧಿಯಾಗುವೆನಲ್ಲಿ

ರೇಷಿಮೆಯು ಜರಿತಾರೆ
ಏನೂ ಕೇಳೆನು ನಾನು
ಪ್ರೇಮಧಾರೆಯಲಿ ಮನಬಿಚ್ಚಿ
ಮೀಯೋಣವೇನು

ಕುಂತರೂ ನಿಂತರು
ನಿನ್ನ ನೆನಪುಗಳೇ ಜೊತೆಗೆ
ನಿಲ್ಲಲಾಗದು ಇನ್ನು
ಹಾರಿ ಬರುವೆನು ನಾನು

✍ಉಮೇಶ ಮುಂಡಳ್ಳಿ ಭಟ್ಕಳ
9945840552