Home Information ಕುಮಟಾದಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ.

ಕುಮಟಾದಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ.

SHARE

ಕುಮಟಾ : ಮಾನ್ಯ ರಾಜ್ಯ ಚುನಾವಣಾ ಆಯೋಗ, ಕರ್ನಾಟಕ ರವರ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ ದಿನಾಂಕ 10-10-2018 ರಿಂದ ದಿನಾಂಕ 20-11-2018 ರ ವರೆಗೆ ಜರುಗಲಿದ್ದು, ಸದ್ರಿ ಅವಧಿಯಲ್ಲಿ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವಿಕೆ, ತಿದ್ದುಪಡಿ ಅಥವಾ ವರ್ಗಾವಣೆ ಮಾಡಬೇಕಾದಲ್ಲಿ ತಮ್ಮ ವ್ಯಾಪ್ತಿಯ ಮತಗಟ್ಟೆಗೆ ಹೋಗಿ ಕ್ರಮವಾಗಿ ನಮೂನೆ 6, 7, 8 ಹಾಗೂ 8ಎ ದಲ್ಲಿ ಅರ್ಜಿಯನ್ನು ಸೂಕ್ತ ದಾಖಲಾತಿಯೊಂದಿಗೆ ಭರಾಯಿಸಿ ಮತಗಟ್ಟೆ ಅಧಿಕಾರಿಗೆ ನೀಡುವಂತೆ ತಹಶೀಲದಾರ ಶ್ರೀ ಮೇಘರಾಜ ಎನ್. ನಾಯ್ಕ ರವರು ತಿಳಿಸಿರುತ್ತಾರೆ.