Home Local ಮಹಿಳೆ ಮನೆಯಲ್ಲಿ ಒಂಟಿಯಾಗಿದ್ದಾಗ ಹಲ್ಲೆ‌ನಡೆಸಿ ಮನೆ ದೋಚಿದ ಕಳ್ಳರು : ಶಿರಸಿಯಲ್ಲಿ ಬೆಳಕಿಗೆ ಬಂತು ಭಯಾನಕ...

ಮಹಿಳೆ ಮನೆಯಲ್ಲಿ ಒಂಟಿಯಾಗಿದ್ದಾಗ ಹಲ್ಲೆ‌ನಡೆಸಿ ಮನೆ ದೋಚಿದ ಕಳ್ಳರು : ಶಿರಸಿಯಲ್ಲಿ ಬೆಳಕಿಗೆ ಬಂತು ಭಯಾನಕ ಘಟನೆ!

SHARE

ಶಿರಸಿ: ಮಹಿಳೆಯೊಬ್ಬಳೇ ಒಂಟಿಯಾಗಿ ಇದ್ದಾಗ ಮನೆಗೆ ಬಂದ ಮುಸುಕುದಾರಿಗಳು ಮಹಿಳೆ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಘಟನೆ ವರದಿಯಾಗಿದೆ.

ಮಹಿಳೆಯ ಮೇಲೆ ಹಲ್ಲೆ ನಡೆದ ನಂತರ ದರೋಡೆಕೋರರಿಂದ ತಪ್ಪಿಸಿಕೊಳ್ಳಲು 15 ಅಡಿ ಎತ್ತರದ ಮನೆಯಂಚಿನ ಹಳ್ಳಕ್ಕೆ ಧುಮುಕಿ 300 ಮಿ. ದೂರದಲ್ಲಿರುವ ನೆರೆ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಸುತ್ತಮುತ್ತಲ ಗ್ರಾಮದವರು ಆಗಮಿಸುವ ವೇಳೆಗೆ ದರೋಡೆ ಕೋರರು ಮನೆಯಲ್ಲಿದ್ದ ಸುಮಾರು 64 ಸಾವಿರ ಮೌಲ್ಯದ 2 ಬಂಗಾರದ ಬಳೆ, 25 ಗ್ರಾಂ ತೂಕದ 2 ಸರ, ಕಿವಿಯೋಲೆ, ಉಂಗುರ ಹಾಗೂ 1 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ತಾಲೂಕಿನ ಶಿಗೇಹಳ್ಳಿ ಬಳಿಯ ತೆಂಗಿನಮನೆ ಹೊನ್ನೆಮಕ್ಕಿಯ ವಿನಯ ಹೆಗಡೆ ಎಂಬವರ ಮನೆಯಲ್ಲಿ ಮಹಿಳೆಯೊಬ್ಬಳು ಒಂಟಿಯಾಗಿದ್ದಾಗ ನಾಲ್ಕು ಜನ ಮುಸುಕು ಧಾರಿಗಳು ಮನೆಗೆ ನುಗ್ಗಿ ಹಲ್ಲೆ ನಡೆಸಿ ಚಿನ್ನಾಭರಣ, ನಗದು ದೋಚಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ ಎನ್ನಲಾಗಿದೆ.

ಮನೆಯೊಡತಿ ಸಾವಿತ್ರಿ ಎನ್ನುವವರು ಮನೆಯಲ್ಲಿ ಒಬ್ಬರೇ ಇದ್ದರು. ಸಂಜೆ ಸುಮಾರು 6.30 ರ ವೇಳೆಗೆ ಕೊಟ್ಟಿಗೆಯಲ್ಲಿ ಹಾಲು ಹಿಂಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ದರೋಡೆ ಕೋರರು ಬಾಯಿ ಮುಚ್ಚಿ ಹಲ್ಲೆ ನಡೆಸಿದ ಘಟನೆ ಇದಾಗಿದೆ

ಕಳ್ಳರು ಮುಸುಕು ವೇಷದಲ್ಲಿ ಇದ್ದು ಕೈಗೆ ಗ್ಲೌಸ್ ಧರಿಸಿದ್ದರು ಎಂದು ಸಾವಿತ್ರಿ ಹೆಗಡೆ ತಿಳಿಸಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.