Home Local ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಕಾರವಾರದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ.

ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಕಾರವಾರದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ.

SHARE

ಕಾರವಾರ: ಇತ್ತೀಚಿಗೆ ನಡೆದ ನೆಹರು ಯುವ ಕೇಂದ್ರ ,ಕಾರವಾರ ಮತ್ತು ಕಾರವಾರದ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಎನ್ಎಸ್ಎಸ್ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಈ ಭಾಷಣ ಸ್ಪರ್ಧೆಯಲ್ಲಿ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಕಾರವಾರದ ವಿದ್ಯಾರ್ಥಿಗಳಾದ ಶಹಾನಾ ಸೈಯದ್ ಪ್ರಥಮ ಸ್ಥಾನ ಮತ್ತು ಅಭಿಷೇಕ್ ಕಳಸ ದ್ವಿತೀಯ ಸ್ಥಾನವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಮತ್ತು ಈ ಸ್ಪರ್ಧೆಯ ಮುಂದಿನ ಹಂತವಾದ ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಇವರಿಬ್ಬರಿಗೆ ಕಾಲೇಜಿನ ಪ್ರಾಚಾರ್ಯರಾದ ಡಾ. ಕಲ್ಪನಾ ಕೆರವಡಿಕರ, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ.ಐ. ಕೆ. ನಾಯ್ಕ್ ಮತ್ತು ಪ್ರೊ. ಲೋಕೇಶ್ , ಸಾಹಿತ್ಯ ಮತ್ತು ಚರ್ಚಾವೇದಿಕೆಯ ಮುಖ್ಯಸ್ಥರಾದ ಪ್ರೊ.ವಿದ್ಯಾನಾಯಕ್ ವಿದ್ಯಾರ್ಥಿನಿಯ ಯೂನಿಯನ್ನಿನ ಮುಖ್ಯಸ್ಥರಾದ ಪ್ರೊ .ವಿಜಯ ನಾಯ್ಕ್ ,ಡಾ.ವೆಂಕಟೇಶ ಗಿರಿ ಮತ್ತು ನೆಹರು ಯುವ ಕೇಂದ್ರದ ಜಿಲ್ಲಾ ಸಂಯೋಜಕರು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.