Home Article ಬುದ್ಧನಾಗಿಸಿದೆಯಲ್ಲೋ! (ರೇಷ್ಮಾ ಉಮೇಶರವರ ಕವನ)

ಬುದ್ಧನಾಗಿಸಿದೆಯಲ್ಲೋ! (ರೇಷ್ಮಾ ಉಮೇಶರವರ ಕವನ)

SHARE

ನನ್ನೊಳಗೆ ಕವಿದ ಮಂಕನುರುಳಿಸಿ
ಒಲುಮೆ ಬತ್ತಿದ ಎದೆಯೊಳಗೆ
ಪ್ರೀತೀಯ ಸುಧೆಯ ಹರಿಸಿ
ಕೊಂದೆಯಲ್ಲವೋ ನೀ ಎನ್ನ.

ಕಾಣದಿಹ ಲೋಕ ದರ್ಶನವ
ನಿನ್ನ ಕಂಗಳಲ್ಲಿ ಕಾಣಲು
ನಾ ಭ್ರಾಂತಿಯಾದೆನಲ್ಲೋ.

ಹಿತನುಡಿಯ ಮಂಜನು ಮೈಮೆಲೆರಚಿ
ಪ್ರೇಮ ಮಂತ್ರವ ಸಾರಿದ
ಒಲುಮೆ ಸಾಧಕ ನೀನು.

ರಕ್ತ ಮಾಂಸದ ಜೊತೆಗೆ ದಿನ ದೂಡುತಲಿರಲು
ಪ್ರೀತಿ ಕರುಣೆಯ ಜ್ಯೋತಿಯ
ಬೆಳಗಿಸಿದೆಯಲ್ಲೋ.

ಓ! ಕರುಣಾಳು
ಪೊರೆದೆ ಇಂದೆನ್ನನು
ಬುದ್ಧನಾಗಿದೆಯಲ್ಲೋ
ನಿನ್ನಂತೆ ನನ್ನನು.

ರೇಷ್ಮಾ ಉಮೇಶ
ಶ್ರೀವಲಿ ಪ್ರೌಢ ಶಾಲೆ ಚಿತ್ರಾಪುರ. ಭಟ್ಕಳ