Home Local ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಕುಮಟಾ ಘಟಕದ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಕುಮಟಾ ಘಟಕದ ಪದಾಧಿಕಾರಿಗಳ ಆಯ್ಕೆ

SHARE

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಪದಾಧಿಕಾರಿಗಳ ಆಯ್ಕೆ ಶನಿವಾರ ಕುಮಟಾದ ಪ್ರವಾಸಿಮಂದಿರದಲ್ಲಿ ನಡೆಯಿತು.

ಸಂಘದ ನೂತನ ಅಧ್ಯಕ್ಷರಾಗಿ ವಿಜಯಕರ್ನಾಟಕ ದಿನಪತ್ರಿಕೆಯ ಹಿರಿಯ ವರದಿಗಾರ ಅನ್ಸಾರ್ ಶೇಖ್, ಉಪಾಧ್ಯಕ್ಷರಾಗಿ ಶ್ರೀಮಂಜುನಾಥ ಟಿವಿಯ ವರದಿಗಾರ ರವಿ ಗಾವಡಿ, ಕಾರ್ಯದರ್ಶಿಯಾಗಿ ವಿಜಯವಾಣಿ ಪತ್ರಿಕೆಯ ವರದಿಗಾರ ಚರಣ ನಾಯ್ಕ, ಖಜಾಂಚಿಯಾಗಿ ಕನ್ನಡ ಜನಾಂತರಂಗ ಪತ್ರಿಕೆಯ ವರದಿಗಾರ ರಾಘವೇಂದ್ರ ಶೇಟ್, ಅವರನ್ನು ನೇಮಕ ಮಾಡಲಾಯಿತು.

ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಉದಯವಾಣಿ‌ ಪತ್ರಿಕೆಯ ವರದಿಗಾರ ಎಸ್ ಎಸ್ ಶರ್ಮಾ, ವಿಸ್ಮಯ ನ್ಯೂಸ್ ವರದಿಗಾರ ಚಂದ್ರಕಾಂತ ನಾಯ್ಕ, ವಿನೋದ್ ಹರಿಕಾಂತ್ರ ಅವರನ್ನು ಆಯ್ಕೆ ಮಾಡಲಾಯಿತು.