Home Important ಅಭಿರಾಮ ಹೆಗಡೆ ವಿರುದ್ಧ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ : ಮಾನಹಾನಿಕರ ಹೇಳಿಕೆ ನೀಡದಂತೆ ಪ್ರತಿಬಂಧ:ಶ್ರೀಗಳಿಗೆ ಸಾಂವಿಧಾನಿಕ ರಕ್ಷಣೆ

ಅಭಿರಾಮ ಹೆಗಡೆ ವಿರುದ್ಧ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ : ಮಾನಹಾನಿಕರ ಹೇಳಿಕೆ ನೀಡದಂತೆ ಪ್ರತಿಬಂಧ:ಶ್ರೀಗಳಿಗೆ ಸಾಂವಿಧಾನಿಕ ರಕ್ಷಣೆ

SHARE

ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ, ಶ್ರೀಸಂಸ್ಥಾನ ಗೋಕರ್ಣ – ಶ್ರೀರಾಮಚಂದ್ರಾಪುರಮಠ ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಘನತೆಗೆ ಧಕ್ಕೆ ಉಂಟುಮಾಡುವ ಹಾಗೂ ಮಾನಹಾನಿಕರವಾದ ಯಾವುದೇ ರೀತಿಯ ಹೇಳಿಕೆಯನ್ನು ಮಾಧ್ಯಮ – ಸಮಾಜಮಾಧ್ಯಮ ಹಾಗೂ ಇನ್ನಿತರ ಯಾವುದೇ ರೀತಿಯಲ್ಲಿ ನೀಡದಂತೆ ಅಭಿರಾಮ್ ಹೆಗಡೆ ವಿರುದ್ಧ ಪ್ರತಿಬಂಧಕಾಜ್ಞೆಯನ್ನು ನ್ಯಾಯಾಲಯ ನೀಡಿದೆ.

ಸದರಿ ವ್ಯಕ್ತಿಯು ಮಾಧ್ಯಮ – ಸಮಾಜಮಾಧ್ಯಮ ಮುಂತಾದವುಗಳನ್ನು ಬಳಸಿಕೊಂಡು ಶ್ರೀರಾಮಚಂದ್ರಾಪುರಮಠ ಹಾಗೂ ಶ್ರೀಗಳ ಗೌರವಕ್ಕೆ ಚ್ಯುತಿತರುವ ಹಾಗೂ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡುತ್ತಿದ್ದು, ವದಂತಿಗಳನ್ನು ಹಬ್ಬಿಸಿ; ತೇಜೋವಧೆ ಮಾಡುವ ಹಾಗು ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಘಾಸಿಗೊಳಿಸುವ ಪ್ರಯತ್ನಗಳನ್ನು ಮಾಡುತ್ತಿದ್ದ. ಈ ಕುರಿತಾಗಿ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಸಂವಿಧಾನ ಪ್ರದತ್ತವಾದ ಸಿಪಿಸಿ 26 ರ ಅನ್ವಯ ಈ ಆದೇಶವನ್ನು ನೀಡಿದೆ.

ಶ್ರೀರಾಮಚಂದ್ರಾಪುರಮಠ ಹಾಗೂ ಪೀಠಾಧಿಪತಿಗಳ ವಿರುದ್ಧ ಮುದ್ರಣ ಮಾಧ್ಯಮ – ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ಸೇರಿದಂತೆ, ಯಾವುದೇ ರೀತಿಯಿಂದಲೂ ಹೇಳಿಕೆ – ಸಂದೇಶಗಳನ್ನು ನೀಡದಂತೆ ಪ್ರತಿಬಂಧಿಸಿ ಆಜ್ಞೆ ಮಾಡಿದ್ದು, ಸಂವಿಧಾನ ಬದ್ಧವಾದ ರಕ್ಷಣೆಯನ್ನು ನೀಡಿದೆ.