Home Local ಕಲಾಗಂಗೋತ್ರಿ-ಕುಮಟಾ ಆಶ್ರಯದಲ್ಲಿನಡೆದು ಪ್ರೇಕ್ಷಕರ ಮನ ಗೆದ್ದ “ಚಂದ್ರಾವಳಿ ವಿಲಾಸ”

ಕಲಾಗಂಗೋತ್ರಿ-ಕುಮಟಾ ಆಶ್ರಯದಲ್ಲಿನಡೆದು ಪ್ರೇಕ್ಷಕರ ಮನ ಗೆದ್ದ “ಚಂದ್ರಾವಳಿ ವಿಲಾಸ”

SHARE

ಕುಮಟಾ – ಸಿರಿ ಕಲಾ ಮೇಳ ಬೆಂಗಳೂರು ಇವರಿಂದ ಕುಮಟಾ ದೇವರಹಕ್ಕಲು ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಸಭಾಭವನದಲ್ಲಿ ಜರುಗಿದ “ಚಂದ್ರಾವಳಿ ವಿಲಾಸ ಎಂಬ ಯಕ್ಷಗಾನ ಪ್ರದರ್ಶನವು ಪ್ರೇಕ್ಷಕರ ಮನಸೂರೆಗೊಂಡಿತು.

ಕಲಾಗಂಗೋತ್ರಿ-ಕುಮಟಾ ಆಶ್ರಯದಲ್ಲಿ ಏರ್ಪಡಿಸಿದ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ, ಮಾತನಾಡಿದ ಸುವರ್ಣಕಾರರ ಬ್ಯಾಂಕ್ ಅಧ್ಯಕ್ಷರು ಹಾಗೂ ಕುಮಟಾ ಪುರಸಭೆಯ ಮಾಜಿ ಅಧ್ಯಕ್ಷ ಮಧುಸೂದನ್ ಶೇಟರವರು ” ಯಕ್ಷಗಾನ ಕಲೆಯು ಅಪ್ಪಟ ಕನ್ನಡ ಕಲೆಯಾಗಿದ್ದು, ನವರಸಗಳಿಂದ ತುಂಬಿರುವ ಶ್ರೇಷ್ಠ ಕಲೆಯಾಗಿದೆ. ಯಕ್ಷಗಾನ ಕಲೆಯು ಇತರ ಎಲ್ಲಾ ಕಲೆಗಳಿಗೆ ಮಾತೃ ಸಮಾನವಾದ ಕಲೆಯಾಗಿರುವುದರಿಂದ ನಾವೆಲ್ಲರೂ ಈ ಕಲೆಯನ್ನು ಪ್ರೀತಿಯಿಂದ ಪ್ರೋತ್ಸಾಹಿಸಿ ಬೆಳೆಸಬೇಕಿದೆ” ಎಂದರು. ಅಧ್ಯಕ್ಷತೆ ವಹಿಸಿದ್ದ ಕಲಾಗಂಗೋತ್ರಿಯ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ “ಯಕ್ಷಗಾನದ ಗಂಡು ಮೆಟ್ಟಿನ ಕಲೆಯೆಂದೇ ಕರೆಸಿಕೊಂಡರೂ ಸಿರಿಕಲಾ ಮೇಳದಲ್ಲಿ ಪ್ರಖ್ಯಾತ ಮಹಿಳಾ ಕಲಾವಿದರಿದ್ದು ಮಹಿಳೆಯರೂ ಕೂಡ ಪುರಷರಷ್ಟೇ ಸಮರ್ಥವಾಗಿ ಯಕ್ಷಗಾನ ಪಾತ್ರ ನಿರ್ನವಹಿಸಬಲ್ಲರೆಂಬುದನ್ನು ಸಾಬೀತುಪಡಿಸಿರುವುದಲ್ಲದೇ ನಾಡಿನಾದ್ಯಂತ ಯಕ್ಷಗಾನ ಕಲೆಯ ಕಂಪು ಚೆಲ್ಲುತ್ತಿದ್ದಾರೆ ” ಎಂದರು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಚೇತನ್ ಶೆಟ್ ಮಾತನಾಡಿ ಇಂದಿನ ಸಮಾಜದಲ್ಲಿ ಗಂಡು ಹೆಣ್ಣು ಎಂಬ ಭೇದ ಭಾವ ಬೇಡ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮುಂದವರಿದಿದ್ದಾರೆ ಎಂದರು. ಈ ಯಕ್ಷಗಾನ ಸಂಯೋಜಕ ಹಾಗೂ ಪುರಸಭೆಯ ಸ್ಥಳೀಯ ಸದಸ್ಯರೂ ಆಗಿರುವ ಎಂ.ಟಿ. ನಾಯ್ಕ ಮಾತನಾಡಿ ಸಂಘಟನೆಗೆ ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಸಿರಿಕಲಾ ಮೇಳದ ಮುಖ್ಯಸ್ಥ ಸುರೇಶ್ ಹೆಗಡೆ ಕಡತೋಕ ಮಾತನಾಡಿ ತಮ್ಮ ಸಂಸ್ಥೆಯು ಬೆಂಗಳೂರಿನಲ್ಲಿ ತಮ್ಮ ಮಗಳು ಅರ್ಪಿತಾ ಹೆಗಡೆಯವರಿಂದ ಹಲವು ವರ್ಷಗಳಿಂದ ಯಕ್ಷಗಾನವನ್ನು ಉಚಿತವಾಗಿ ಕಲಿಸುತ್ತಿರುವ ಬಗ್ಗೆ ತಿಳಿಸಿ, ಯಕ್ಲಗಾನ ಕಲೆಗೆ ಕಲಾಗಂಗೋತ್ರಿಯ ಕೊಡುಗೆ ಇತರರಿಗೆ ಮಾದರಿ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಹಿರಿಯ ಅರ್ಚಕರಾದ ಸುಬ್ರಾಯ (ಗಣಪಯ್ಯ ) ತಿಮ್ಮಪ್ಪ ಗುನಗಾ ಇವರನ್ನು ಸನ್ಮಾನಿಸಲಾಯಿತು.

ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ಭರತನಾಟ್ಯ ಕಲಾವಿದೆ, ವಿದುಷಿ ಸೌಮ್ಯ ಭಟ್ಟ. ಯಕ್ಷಗಾನ ಕಲಾವಿದ ಹರಿದಾಸ ಪಿ. ಎನ್. ಹೆಗಡೆ ಹಾಗೂ ಉದ್ಯಮಿ ಸಚಿನ್ ಶೇಟ ಇವರಿಗೆ ಮೌನಾಚರಣೆ ಮೂಲಕ ಶೃದ್ಧಾಂಜಲಿ ಸಮರ್ಪಿಸಲಾಯಿತು. ಕಲಾಗಂಗೋತ್ರಿಯ ಪ್ರಧಾನ ಕಾರ್ಯದರ್ಶಿ ಆರ್. ಡಿ. ಪೈ ಸ್ ಆರ್. ಡಿ .ಪೈ ಸ್ವಾಗತಿಸಿದರು. ಉಪಾಧ್ಯಕ್ಷ ಗಣೇಶ ಭಟ್ಟ ಪ್ರಸ್ತಾವಿತ ಮಾತನಾಡಿದರು. ಡಾ.ಜಿ ಎಸ್. ಭಟ್ ವಂದಿಸಿದರು. ಶಿಕ್ಷಕ ಮಂಜುನಾಥ್ ನಾಯ್ಕ ನಿರೂಪಿಸಿದರು.

ನಂತರ ಜರುಗಿದ ” ಚಂದ್ರಾವಳಿವಿಲಾಸ ” ಯಕ್ಷಗಾನದ ಕೃಷ್ಣನಾಗಿ- ಅರ್ಪಿತಾ ಹೆಗಡೆ, ಚಂದ್ರಾವಳಿ – ನಾಗಶ್ರೀ ಗೀಜಗಾರ್, ಅಜ್ಜಿಯಾಗಿ- ಶ್ರೀಧರ್ ಕಾಸರಕೋಡ್, ಚಂದಗೋಪನಾಗಿ- ನಾಗೇಂದ್ರ ಮೂರೂರು. ರಾಧೆಯಾಗಿ –