Home Astrology ಇಂದಿನ ದಿನ ನಿಮ್ಮ ಪಾಲಿಗೆ ಹೇಗಿದೆ? ದಿನಾಂಕ 09/11/2018 ರ ದಿನ ಭವಿಷ್ಯ ಇಲ್ಲಿದೆ ನೋಡಿ.

ಇಂದಿನ ದಿನ ನಿಮ್ಮ ಪಾಲಿಗೆ ಹೇಗಿದೆ? ದಿನಾಂಕ 09/11/2018 ರ ದಿನ ಭವಿಷ್ಯ ಇಲ್ಲಿದೆ ನೋಡಿ.

SHARE

ಮೇಷ:–
ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ ನಿರೀಕ್ಷಿತವಾದ ಕಾರ್ಯ ಸಿದ್ಧಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ದೇಹಾರೋಗ್ಯದ ಬಗ್ಗೆ ಗಮನ ಹರಿಸಬೇಕು. ಸಣ್ಣ ಸಣ್ಣ ವಿಚಾರಗಳಲ್ಲಿ ಕೋಪತಾಪಗಳಿಂದ ಉದ್ವೇಗಗೊಳ್ಳುವಿರಿ. ಶುಭಮಂಗಲ ಕಾರ್ಯಗಳಿಗೆ ಆಗಾಗ ಖರ್ಚುವೆಚ್ಚಗಳಿರುತ್ತವೆ. ಹಿಡಿತ ಬಲವಿರಬೇಕು. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ವೃಷಭ:-
ಆರೋಗ್ಯ ಸುಧಾರಿಸುತ್ತದೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಬೇಕು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ನಿರೀಕ್ಷಿತ ಕೆಲಸಗಳು ಉತ್ತಮ ಫಲ ನೀಡುವುದರೊಂದಿಗೆ ಹಣಕಾಸಿನ ಅನುಕೂಲತೆಗಳು ದೊರಕಲಿದೆ. ಬಂಧುಗಳಿಂದ ಉತ್ತಮ ಸಹಕಾರ ದೊರಕಲಿದೆ. ವಿದ್ಯಾರ್ಥಿಗಳಿಗೆ ಆಗಾಗ ಆಲಸ್ಯ ಇರುತ್ತದೆ. ವಾಹನ ಖರೀದಿಗೆ ಸಕಾಲವಲ್ಲ. ಶುಭಮಂಗಲ ಕಾರ್ಯಗಳಿಗೆ ವಿಳಂಬವಾಗುತ್ತದೆ.

ಮಿಥುನ:–
ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪ್ರಗತಿ. ನೂತನ ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ ಸಿಗದು. ಯೋಗ್ಯ ವಯಸ್ಕರು ಉತ್ತಮ ಸಂಬಂಧಿಗಳ ಪ್ರಸ್ತಾವಕ್ಕೆ ಕಂಕಣಬಲವನ್ನು ಹೊಂದಲಿದ್ದಾರೆ. ಸರಕಾರಿ ಅಧಿಕಾರಿಗಳಿಗೆ ಮುಂಭಡ್ತಿ ಇರುತ್ತದೆ. ಭವಿಷ್ಯಕ್ಕೆ ಸಂಬಂಧಿಸಿದ ಹಲವಾರು ಉತ್ತಮ ಮಾರ್ಗಗಳು ಗೋಚರ. ದೀರ್ಘಕಾಲದಿಂದ ಚಿಂತಿಸುತ್ತಿರುವ ಕಾರ್ಯವೊಂದು ಕಾರ್ಯರೂಪಕ್ಕೆ ಬರಲಿದೆ.

ಕಟಕ :-
ಆರ್ಥಿಕವಾಗಿ ಲಾಭವಾದರೂ ವಂಚನೆಗೆ ಗುರಿಯಾಗಲಿದ್ದೀರಿ. ಬ್ಯಾಂಕ್, ಸಹಕಾರ ಕ್ಷೇತ್ರಗಳಲ್ಲಿ ದುಡಿಯುವವರಿಗೆ ಉತ್ತಮ ಸಹಕಾರ. ಕಾರ್ಯಕ್ಷೇತ್ರದಲ್ಲಿ ಅನಿರೀಕ್ಷಿತ ಪ್ರಶಂಸೆಗಳು ನಿಮ್ಮ ಪಾಲಿಗೆ ಬರಲಿದೆ. ಮಹಿಳೆಯರ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.ಆಗಾಗ ಸಂಚಾರದಿಂದ ದೇಹಾಯಾಸಕ್ಕೆ ಕಾರಣವಾಗಲಿದೆ. ಸಾಂಸಾರಿಕವಾಗಿ ಮನದನ್ನೆಯ ಮಾತನ್ನು ನಡೆಸಬೇಕಾಗುತ್ತದೆ. ದಿನಾಂತ್ಯ ಶುಭ.

ಸಿಂಹ:–
ಹೊಸ ಕೆಲಸಗಳು ನಿರ್ವಿಘ್ನದಾಯಕವಾಗಿ ನಡೆಯಲಿವೆ. ಸಿದ್ಧಿಯಾಗಲಿದೆ. ಶ್ರೀದೇವತಾದರ್ಶನ ಭಾಗ್ಯದಿಂದ ಶಾಂತಿ ಸಿಗಲಿದೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಬೇಕು. ಬಹುದಿನಗಳ ಬಳಿಕ ಮನಸ್ಸಿಗೆ ನೆಮ್ಮದಿ ಇರುತ್ತದೆ. ಆಗಾಗ ಧನವ್ಯಯವಾದರೂ ಕಾರ್ಯ ವಿದ್ಯಾರ್ಥಿಗಳಿಗೆ ಅದೃಷ್ಟ ಒಲಿದುಬರಲಿದೆ. ಮನೋರಂಜನೆಗಾಗಿ ಹೆಚ್ಚಿನ ವೆಚ್ಚ ಭರಿಸಬೇಕಾದೀತು. ಸುಖಾನುಭವವಾಗಲಿದೆ.

ಕನ್ಯಾ :-
ವೃದ್ಧಿಯಾಗಲಿದೆ. ಹಣಕಾಸಿನ ಬಗ್ಗೆ ಹಿಡಿತ ಇರಲಿ. ವ್ಯಾಪಾರದಲ್ಲಿ ಲಾಭ. ನೆಮ್ಮದಿಯ ದಿನ. ಕೆಲಸ ಕಾರ್ಯಗಳಲ್ಲಿ ಮುನ್ನಡೆ ಹಾಗೂ ಯಶಸ್ಸು ನಿಮ್ಮದಾಗಲಿದೆ. ಆರ್ಥಿಕ ಸಂಪನ್ಮೂಲಗಳನ್ನು ಹುಡುಕುವ ಭರದಲ್ಲಿ ಎಚ್ಚರಿಕೆ ಅಗತ್ಯ. ಅನಾವಶ್ಯಕವಾಗಿ ದುಂದುವೆಚ್ಚಗಳಾಗಬಹುದು. ಕಾರ್ಮಿಕ ವರ್ಗದವರ ಮನೋಕಾಮನೆ ನೆರವೇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯ

ತುಲಾ:–
ಕೆಲಸ ಕಾರ್ಯಗಳು ಸರಾಗವಾಗಿ ನಿರ್ವಹಣೆಯಾಗಲಿದೆ. ದೂರದೂರುಗಳಿಗೆ ಪ್ರಯಾಣ ಸಾಧ್ಯತೆ ಕಂಡುಬರುವುದು. ಸಂಚಾರದಲ್ಲಿ ದೇಹಾಯಾಸ ತಂದೀತು. ಯೋಗ್ಯ ವಯಸ್ಕರು ಕಂಕಣಬಲಕ್ಕೆ ಪೂರಕವಾದಾರು. ಹೂಡಿಕೆಗಳು ಆದಾಯವನ್ನು ಹೆಚ್ಚಿಸಲಿವೆ. ವೃತ್ತಿರಂಗದಲ್ಲಿ ಕಾರ್ಯಒತ್ತಡಗಳಿರುತ್ತವೆ. ದಿನಾಂತ್ಯ ಶುಭವಿದೆ. ವಾಹನ ಚಾಲನೆಯಲ್ಲಿ ಎಚ್ಚರ ಅಗತ್ಯ. ಮಕ್ಕಳ ನಡವಳಿಕೆಗಳ ಬಗ್ಗೆ ಗಮನ ಅಗತ್ಯ.

ವೃಶ್ಚಿಕ :-
ನಿರುದ್ಯೋಗಿಗಳು ಬಂದ ಅವಕಾಶಗಳನ್ನು ಸದುಪಯೋಗಿಸಬೇಕು. ಆರ್ಥಿಕ ಸ್ಥಿರತೆಯಿಂದಾಗಿ ನೆಮ್ಮದಿ ಮೂಡಲಿದೆ. ನೆರೆಹೊರೆಯವರೊಂದಿಗೆ ಮಧುರ ಬಾಂಧವ್ಯ ಉಂಟಾಗುವುದು. ವಿದೇಶದಲ್ಲಿರುವ ಕುಟುಂಬದಿಂದ ಸುವಾರ್ತೆ. ಮಾತೃವರ್ಗದವರ ಸಮಾಗಮ. ಅನಗತ್ಯವಾದ ವಿವಾದಗಳಿಂದ ಕಿರಿಕಿರಿ ತಂದೀತು. ಮನೆಯಲ್ಲಿ ಚೋರ ಭೀತಿ ತಂದೀತು. ದೇಹಾರೋಗ್ಯದ ಬಗ್ಗೆ ಗಮನ ವಿರಬೇಕು.

ಧನಸ್ಸು:–
ವೈವಾಹಿಕ ವ್ಯವಹಾರಗಳಲ್ಲಿ ಬಂಧು ಮನ್ನಣೆ ದೊರಕಲಿದೆ. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ ವಿರುತ್ತದೆ. ಶ್ರೀದೇವರ ಅನುಗ್ರಹದಿಂದ ಮನಸ್ಸಿಗೆ ಶಾಂತಿ ಸಮಾಧಾನ ವಿರುತ್ತದೆ. ಹಿರಿಯ ಅಧಿಕಾರಿಗಳಿಗೆ ಮುಂಭಡ್ತಿ ಹಾಗೂ ಶ್ರೀದೇವರ ದರ್ಶನ ಭಾಗ್ಯವಿದೆ. ವೈಯಕ್ತಿಕ ಬದುಕಿನಲ್ಲಿ ಹಿತಕರ ಬದಲಾವಣೆ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಹುಮ್ಮಸ್ಸು ತರುವಂತಹ ವಾತಾವರಣ ಮೂಡಲಿದೆ.

ಮಕರ :-
ಬಂಡವಾಳ ಕರಗಲಿದೆ ಜಾಗ್ರತೆ ವಹಿಸಿರಿ. ಉದ್ಯೋಗದಲ್ಲಿ ಒಳ್ಳೆಯ ಹೆಸರು ಪಡೆಯುವಿರಿ. ದೂರದ ಊರಿಗೆ ವರ್ಗಾವಣೆಯಾಗುವ ಸಾಧ್ಯತೆ ಕಂಡುಬರುವುದು. ಮನೆ ನಿರ್ಮಾಣಕ್ಕೆ ಸಂಬಂಧಿಸಿದ ವ್ಯವಹಾರ ಗಳಲ್ಲಿ ಅಭಿವೃದ್ಧಿ ಕಂಡುಕೊಳ್ಳುವಿರಿ. ನಿರೀಕ್ಷಿತ ಕೆಲಸಕಾರ್ಯಗಳು ಎಣಿಸಿದಂತೆ ನಡೆಯಲಾರವು. ವಿದ್ಯಾರ್ಥಿಗಳು ಅಧಿಕ ಪ್ರಯತ್ನಬಲದಿಂದ ಮುಂದುವರಿಯಬೇಕಾಗುತ್ತದೆ. ದಿನಾಂತ್ಯ ಶುಭವಿದೆ.

ಕುಂಭ:-
ರಚನಾತ್ಮಕ ಕಾರ್ಯಕ್ರಮಗಳಿಗೆ ವೆಚ್ಚ ಭರಿಸಬೇಕಾದೀತು. ಮನಸ್ಸಿನಂತೆ ಒಂದೊಂದೇ ಕಾರ್ಯಗಳು ನಡೆಯಲಿವೆ. ದೇಹಾರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ. ವೃತ್ತಿರಂಗದಲ್ಲಿ ಹೊಂದಿಕೊಂಡು ಹೋಗುವ ದಿನಗಳಿವು. ಧೈರ್ಯದಿಂದ ಮುಂದುವರಿಯಿರಿ. ಅಣ್ಣನ ಸಹಕಾರದಿಂದ ನೆಮ್ಮದಿ. ವ್ಯವಹಾರಗಳ ಬಗ್ಗೆ ಸೋದರರೊಡನೆ ಚರ್ಚೆ. ಕುಟುಂಬದಲ್ಲಿ ಆರೋಗ್ಯಕರ ಬದಲಾವಣೆ ಕಂಡುಕೊಳ್ಳುವಿರಿ.

ಮೀನ:-
ಸಾಂಸಾರಿಕವಾಗಿ ಸಂತಸದ ದಿನ. ಪುತ್ರ ಸಮಸ್ಯೆ ಪರಿಹಾರವಾಗಿ ಮಾನಸಿಕ ನೆಮ್ಮದಿ. ಧಾರ್ಮಿಕ ಕಾರ್ಯಕ್ರಮಗಳ ಸಂಭ್ರಮ. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಮಹಿಳೆಯರ ಮಾನಸಿಕ ನೆಮ್ಮದಿ ಕದಡುವ ಪ್ರಸಂಗ ಎದುರಾದೀತು. ಎಣಿಸಿದ ಕೆಲಸಕಾರ್ಯಗಳು ಹಂತ ಹಂತವಾಗಿ ನಡೆಯಲಿವೆ. ಹೊಸ ಕೆಲಸಕಾರ್ಯಗಳು ವಿಳಂಬವಾದಾವು. ಅಧ್ಯಾಪಕರಿಗೆ ಸ್ಥಾನ ಬದಲಾವಣೆ ತೋರಿ ಬಂದೀತು.