Home Local ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯಿಂದ ವಿದ್ಯಾರ್ಥಿವೇತನ ವಿತರಣೆ.

ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯಿಂದ ವಿದ್ಯಾರ್ಥಿವೇತನ ವಿತರಣೆ.

SHARE

ಶಿರಸಿ : ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ(ಉ.ಕ.) ಇದರ 2018-19 ಸಾಲಿನ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ಸಂಘದ ಅಡಿಕೆ ವ್ಯಾಪಾರ ಅಂಗಳದಲ್ಲಿ ನೆರವೇರಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿರಸಿ ಇದರ ನ್ಯಾಯಾಧೀಶರಾದ ಶ್ರೀ ಶಾಂತವೀರ ಶಿವಪ್ಪ ಹಾಗೂ 1ನೇ ಹೆಚ್ಚುವರಿ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ಶ್ರೀ ನರೇಂದ್ರ ಬಿ. ಆರ್. ಆಗಮಿಸಿದ್ದರು. ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರು ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

2018 -19 ನೇ ಸಾಲಿನ ವಿದ್ಯಾರ್ಥಿವೇತನದ ಸಮಾರಂಭದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಂಘದ ಸದಸ್ಯರ ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಈ ವಿದ್ಯಾರ್ಥಿವೇತನವನ್ನು ಈ ವರ್ಷ 401 ವಿದ್ಯಾರ್ಥಿಗಳಿಗೆ ರೂ.5,54,000 ಗಳನ್ನು ಸಂಘದಿಂದ ವಿತರಿಸಲಾಗಿದೆ ಎಂದು ತಿಳಿಸಿದರು. ಹಾಗೂ ಶ್ರೀಮತಿ ನೇತ್ರಾವತಿ ಶ್ರೀಪಾದ ಹೆಗಡೆ ಕಡವೆಯವರ ಸ್ಮರಣಾರ್ಥ ಇರಿಸಿರುವ ದತ್ತಿನಿಧಿ ಹಾಗೂ ಶ್ರೀ ರವೀಂದ್ರ ಗ. ತೇಲಂಗ ಕೊರ್ಲಕಟ್ಟಾ ಅವರ ಸ್ಮರಣಾರ್ಥ ಇರಿಸಿರುವ ದತ್ತಿನಧಿಗಳಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವ ಕುಮಾರ ಚಿನ್ಮಯ ದತ್ತಗುರು ಹೆಗಡೆ ಕಡವೆ ಹಾಗೂ ಕುಮಾರಿ ಅಖಿಲಾ ಉದಯಶಂಕರ ಹೆಗಡೆ ಮಣ್ಣಿಕೊಪ್ಪ ಅವರಿಗೆ ದತ್ತಿನಿಧಿ ಪುರಸ್ಕಾರವಾಗಿ ನೀಡಲಾಗಿದೆ. ಹಾಗೂ ಶ್ರೀ ರಾಮಚಂದ್ರ ನರಸಿಂಹ ಹೆಗಡೆ ಕಿಬ್ಬಳ್ಳಿ ಬೈರುಂಬೆ ಅವರು ಇರಿಸಿರುವ ದತ್ತಿನಿಧಿಯಿಂದ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿರುವ ವಿದ್ಯಾರ್ಥಿನಿ ಕುಮಾರಿ ವರ್ಷಿಣಿ ಮಧುಕೇಶ್ವರ ಭಟ್ಟ, ಹೆಗ್ಗಾರ ಅವರಿಗೆ ಹಾಗೂ ವಾಣಿಜ್ಯ ವಿಭಾಗದ ಪಧವಿ ಶಿಕ್ಷಣದ 3ನೇ ವರ್ಷದ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕುಮಾರಿ ಭಾಗ್ಯಶ್ರೀ ಜಗನ್ನಾಥ ನಾಯಕ ಬೇಂಗ್ರೆ, ಸಿದ್ದಾಪುರ ಇವರಿಗೆ ದತ್ತಿನಿಧಿ ಪುರಸ್ಕಾರವನ್ನು ನೀಡಲಾಯಿತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಸಂಘದ ಪ್ರದಾನ ವ್ಯವಸ್ಥಾಪಕರು, ಸಿಬ್ಬಂದಿಗಳು, ಹಾಗೂ ಸದಸ್ಯರು ಉಪಸ್ಥಿತರಿದ್ದರು.