Home Local ಶ್ರೀಕುಮಾರ್ ರೋಡಲೈನ್ಸ ಮತ್ತು ಟ್ರಾವೆಲ್ಸನ ಕೇಂದ್ರ ಕಛೇರಿ ಉದ್ಘಾಟನೆ ಇಂದು.

ಶ್ರೀಕುಮಾರ್ ರೋಡಲೈನ್ಸ ಮತ್ತು ಟ್ರಾವೆಲ್ಸನ ಕೇಂದ್ರ ಕಛೇರಿ ಉದ್ಘಾಟನೆ ಇಂದು.

SHARE

ಹೊನ್ನಾವರ :ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಹಾಗೂ ಅತ್ಯುತ್ತಮ ಸಾರಿಗೆ ಸಂಸ್ಥೆಗಳಲ್ಲಿ ಒಂದಾದ ಶ್ರೀಕುಮಾರ ರೋಡ್ ಲೈನ್ ಹಾಗೂ ಟ್ರಾವೆಲ್ಸ ನ ಕೇಂದ್ರ ಕಛೇರಿ ಉದ್ಘಾಟನೆ ಇಂದು ನಡೆಯಲಿದೆ.

ಹೊನ್ನಾವರ ತಾಲೂಕಿನ ಕರ್ಕಿಯ ಸಮೀಪ ಪ್ರಧಾನ ಕಚೇರಿಯನ್ನು ಸ್ಥಾಪಿಸಿ ಶ್ರೀ ಕುಮಾರ ರೋಡ್ ಲೈನ್ ನ ಮಾಲಿಕರಾದ ಶ್ರೀ ವೆಂಕಟ್ರಮಣ ಹೆಗಡೆ ಕವಲಕ್ಕಿಯವರು ಯಶಸ್ವಿಯಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಎಸ್‌.ಆರ್.ಎಲ್ ಸಂಸ್ಥೆ ನಿಶಾಚರ ಬಸ್ ಗಳನ್ನು ಪ್ರಾರಂಭಿಸುವ ಮೂಲಕ ಅನೇಕ ವರ್ಷಗಳ ಕಾಲ ಸೇವೆ ನೀಡುತ್ತಾ ಕನ್ನಡಿಗರ ಮನ ಗೆದ್ದಿದೆ.

ಶ್ರೀಕುಮಾರ ಹೆಸರಿನಲ್ಲಿ ಪ್ರಾರಂಭದಿಂದ ಇಲ್ಲಿಯವರೆಗೆ ಏಳ್ಗೆಯನ್ನು ಕಂಡಿರುವ ಸಂಸ್ಥೆಯ ಹಿಂದೆ ಶ್ರೀ ವೆಂಕಟ್ರಮಣ ಹೆಗಡೆಯವರ ಪರಿಶ್ರಮ ಇದೆ. ಹಗಲಿರುಳೆನ್ನದೆ ಪ್ರಯತ್ನ ಶೀಲರಾಗಿರುವ ಇವರ ಕಾರ್ಯಕ್ಷಮತೆ ಮೆಚ್ಚುಗೆ ಗಳಿಸಿದೆ.

ಇಂದಿನ ಈ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಗಾಗಿ ದುಡಿಯುತ್ತಿರುವ ಅನೇಕರನ್ನು ಅಭಿನಂದಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದು ಎಲ್ಲ ಹಿತೈಶಿಗಳನ್ನು ಶ್ರೀಕುಮಾರ ಸಂಸ್ಥೆಯ ಮಾಲಿಕರಾದ ವೆಂಕಟ್ರಮಣ ಹೆಗಡೆ ಆಮಂತ್ರಿಸಿದ್ದಾರೆ.