Home Local ಆಸ್ತಿಗಾಗಿ ಮಗನ‌ ಮೇಲೆಯೇ ಹಲ್ಲೆ‌ಮಾಡಿದ ಅಪ್ಪ: ಕುಮಟಾದಲ್ಲಿ ನಡೆಯಿತು ಬೆಚ್ಚಿ ಬೀಳುವ ಘಟನೆ.

ಆಸ್ತಿಗಾಗಿ ಮಗನ‌ ಮೇಲೆಯೇ ಹಲ್ಲೆ‌ಮಾಡಿದ ಅಪ್ಪ: ಕುಮಟಾದಲ್ಲಿ ನಡೆಯಿತು ಬೆಚ್ಚಿ ಬೀಳುವ ಘಟನೆ.

SHARE

ಕುಮಟಾ : ಅಪ್ಪನಿಂದಲೇ‌ ಮಗನ ಮೇಲೆ ಬರ್ಭರವಾಗಿ ಹಲ್ಲೆ ನಡೆದ ಘಟನೆಯೊಂದು ಇದೀಗ ಕುಮಟಾ ಜನರನ್ನು ಬೆಚ್ಚಿ ಬೀಳಿಸಿದೆ.

ಆಸ್ತಿ ವಿಚಾರಕ್ಕೆ ಮಗನ ಮೇಲೆ ಹಲ್ಲೆ ಮಾಡಿದ ತಂದೆಯ ಪ್ರಕರಣ ಈಗ ಸುದ್ದಿಯಲ್ಲಿದೆ.

ಆಸ್ತಿ ವಿಚಾರಕ್ಕಾಗಿ ಕುಮಟಾದ ಎತ್ತಿನ ಬೈಲ್ ನ ನಿವಾಸಿ ಹರಿಹರ ದೇಶಭಂಡಾರಿ ಎಂಬಾತ ಮಗ ಶಿವಾನಂದ ದೇಶಭಂಡಾರಿ ಮೇಲೆ ಹಲ್ಲೆ ಮಾಡಿದ್ದಾನೆ.

ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಮಿರ್ಜಾನದ ಎತ್ತುನ ಬೈಲ್ ನಲ್ಲಿ ನಡೆದ ಈ ಘಟನೆಯಿಂದ ಶಿವಾನಂದ ದೇಶಭಂಡಾರಿಗೆ ಬಲವಾದ ಪೆಟ್ಟು ಬಿದ್ದಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.