Home Local ಜಿಲ್ಲಾ ಕ.ಸಾ.ಪ. ದಿಂದ ಅನುಭವ ಮಂಟಪ ಅಸ್ತಿತ್ವಕ್ಕೆ : ಶಂಕರ ಮುಂಗರವಾಡಿ ಸಂಚಾಲಕರಾಗಿ ನೇಮಕ

ಜಿಲ್ಲಾ ಕ.ಸಾ.ಪ. ದಿಂದ ಅನುಭವ ಮಂಟಪ ಅಸ್ತಿತ್ವಕ್ಕೆ : ಶಂಕರ ಮುಂಗರವಾಡಿ ಸಂಚಾಲಕರಾಗಿ ನೇಮಕ

SHARE

ಕಾರವಾರ: 12ನೇ ಶತಮಾನದ ವಚನ ಚಳುವಳಿಗಾರರ ಚಿಂತನೆಯನ್ನು ಪರಾಮರ್ಷಿಸುವ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಅಧೀನದಲ್ಲಿ ‘ಅನುಭವ ಮಂಟಪ’ ಎಂಬ ಹೆಸರಿನಲ್ಲಿ ಪ್ರತ್ಯೇಕ ವೇದಿಕೆಯನ್ನು ಆರಂಭಿಸಿದ್ದು ಅದರ ಸಂಚಾಲಕರನ್ನಾಗಿ ದಾಂಡೇಲಿಯ ಶಂಕರ ಮುಂಗರವಾಡಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ತಿಳಿಸಿದ್ದಾರೆ.

ವಚನ ಚಳುವಳಿ ಸಂದರ್ಭದ ಬಸವಣ್ಣ, ಚೆನ್ನಬಸವಣ್ಣ, ಜೇಡರ ದಾಸಿಮಯ್ಯ, ಅಕ್ಕಮಹಾದೇವಿ. ಅಲ್ಲಮಪ್ರಭು, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ ಮುಂತಾದ ಚಿಂತಕರ ಬದುಕು ಬರಹದ ಬಗ್ಗೆ ಈ ವೇದಿಕೆಯಲ್ಲಿ ಚರ್ಚಿಸಲಾಗುವುದು. ಜಿಲ್ಲೆಯಾದ್ಯಂತ ವಚನ ಚಳುವಳಿಗೆ ಸಂಭಂಧಪಟ್ಟಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಹೊಣೆಯನ್ನು ಶಂಕರ ಮುಂಗರವಾಡಿ ಅವರಿಗೆ ವಹಿಸಲಾಗಿದೆ.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಚನಳ ಸತ್ವ ಮತ್ತು ಸ್ವತ್ವದ ಬಗ್ಗೆ ಸ್ಪರ್ಧೆಗಳನ್ನು ಏರ್ಪಡಿಸಿ ಹೊಸ ತಲೆಮಾರಿಗೆ ವಚನದ ಮಹತ್ವವನ್ನು ತಿಳಿಸುವ ಪರಿಚಾರಿಕೆಯನ್ನೂ ಶಂಕರ ಮುಂಗರವಾಡಿ ಅವರು ಮಾಡಲಿದ್ದಾರೆ. ಸದ್ಯದಲ್ಲಿಯೇ ಅನುಭವ ಮಂಟಪ ವೇದಿಕೆಯ ಉದ್ಘಾಟಮಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅರವಿಂದ ಕರ್ಕಿಕೋಡಿ ಹೇಳಿದ್ದಾರೆ.