Home Important ಟಿಪ್ಪು ಜಯಂತಿ ಬದಲು ಸಿದ್ದರಾಮಯ್ಯ ಜಯಂತಿ ಆಚರಿಸುವುದು ಒಳ್ಳೆಯದು : ನಳೀನ್ ಕುಮಾರ್ ಕಟೀಲ್

ಟಿಪ್ಪು ಜಯಂತಿ ಬದಲು ಸಿದ್ದರಾಮಯ್ಯ ಜಯಂತಿ ಆಚರಿಸುವುದು ಒಳ್ಳೆಯದು : ನಳೀನ್ ಕುಮಾರ್ ಕಟೀಲ್

SHARE

ಮಂಗಳೂರು: ತೀವ್ರ ವಿರೋಧದ ನಡುವೆಯೂ ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವುದಕ್ಕೆ ಸಂಸದ ನಳೀನ್ ಕುಮಾರ್ ಕಟೀಲ್ ತೀವ್ರ ಟೀಕೆ ಮಾಡಿದ್ದಾರೆ.

ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಸಲ್ಮಾನರಿಗೆ ಬೇಡದ ಇಸ್ಲಾಂ ವಿರೋಧಿ ಟಿಪ್ಪು ಸುಲ್ತಾನ್. ಇಂತಹ ಟಿಪ್ಪು ಜಯಂತಿಯನ್ನು ಆಚರಿಸಿದ್ದು ಸಿದ್ದರಾಮಯ್ಯ. ಈ ಮೂಲಕ ತಾನೊಬ್ಬ ಮುಸಲ್ಮಾನ ಮೌಲ್ವಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಗಿಂತ ದೊಡ್ಡ ಮತಾಂಧ. ಹೀಗಾಗಿ ಟಿಪ್ಪು ಜಯಂತಿ ಬದಲು ಸಿದ್ದರಾಮಯ್ಯ ಜಯಂತಿ ಆಚರಿಸುವುದು ಒಳ್ಳೆಯದು ಎಂದು ಸಂಸದ ನಳೀನ್ ಕುಮಾರ್ ಕಟೀಲ್ ವ್ಯಂಗ್ಯ ಮಾಡಿದ್ದಾರೆ.

ಟಿಪ್ಪು ಜಯಂತಿ ಆಚರಣೆ ಮೂಲಕ ಹಿಂದೂ ಕ್ರೈಸ್ತ , ಮುಸಲ್ಮಾನರ ನಡುವೆ ಒಡಕು ಉಂಟು ಮಾಡಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಟಿಪ್ಪು ಜಯಂತಿ ಆಚರಣೆ ಮೂಲಕ ಸಿದ್ದರಾಮಯ್ಯ ಟಿಪ್ಪುಗಿಂತ ನಾನೇನೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ. ಟಿಪ್ಪು ಜೀವನ ಹಾಗೂ ವ್ಯಕ್ತಿತ್ವ ಸಂಶಯಾಸ್ಪದವಾಗಿದೆ. ಆದಾಗ್ಯೂ ಸಿದ್ದರಾಮಯ್ಯ ನಡೆದ ದಾರಿಯಲ್ಲೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡೆಯುವ ಮೂಲಕ ಮುಸಲ್ಮಾನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ನಳೀನ್​ ಕುಮಾರ್​ ಆಕ್ರೋಶ ವ್ಯಕ್ತಪಡಿಸಿದರು.