Home Local ಶ್ರೀಕುಮಾರ್ ರೋಡ್ ಲೈನ್ಸ್ ಪ್ರಮುಖ ಪ್ರಧಾನ ಕಛೇರಿ ಉದ್ಘಾಟಿಸಿದ ವಿಜಯ ಸಂಕೇಶ್ವರ.

ಶ್ರೀಕುಮಾರ್ ರೋಡ್ ಲೈನ್ಸ್ ಪ್ರಮುಖ ಪ್ರಧಾನ ಕಛೇರಿ ಉದ್ಘಾಟಿಸಿದ ವಿಜಯ ಸಂಕೇಶ್ವರ.

SHARE

ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಹಾಗೂ ಅತ್ಯುತ್ತಮ ಸಾರಿಗೆ ಸಂಸ್ಥೆಗಳಲ್ಲಿ ಒಂದಾದ ಶ್ರೀಕುಮಾರ ರೋಡ್ ಲೈನ್ ನ ಪ್ರಧಾನ ಕಛೇರಿ ಉದ್ಘಾಟನೆ ತಾಲೂಕಿನ ಕರ್ಕಿ ಸಮೀಪ ನಡೆಯಿತು.


ಎಸ್.ಆರ್.ಎಲ್ ಗ್ರೂಪ್‌ ನ ಚೇರ್ ಮನ್ ಶ್ರೀ ವಿಜಯ್ ಸಂಕೇಶ್ವರ ಅವರು ಕೇಂದ್ರ ಕಚೇರಿಯ ಉದ್ಘಾಟನೆಯನ್ನು ನೆರವೇರಿಸಿದರು . ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಂಸ್ಥೆಯನ್ನು ನಡೆಸುವುದು ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ .ಆದರೆ ಈ ರೀತಿಯ ಸಂಸ್ಥೆಗಳನ್ನು ನಡೆಸುತ್ತಿರುವ ಮಾಲೀಕರಾದ ವೆಂಕಟ್ರಮಣ ಹೆಗಡೆ ಶ್ಲಾಘನೆಗೆ ಅರ್ಹರು ಎಂದು ಅಭಿನಂದಿಸಿದರು .

ಲೆಕ್ಕಪತ್ರ ವಿಭಾಗವನ್ನು ಉದ್ಘಾಟಿಸಿದ ಕೆಡಿಸಿಸಿ ಬ್ಯಾಂಕ್ ಶಿರಸಿ ಅಧ್ಯಕ್ಷರು ಹಾಗೂ ಎಂ.ಎಲ್ .ಸಿಗಳಾದ ಶ್ರೀಕಾಂತ್ ಎಲ್ ಘೋಟ್ನೇಕರ್ ಶ್ರೀ ವೆಂಕಟ್ರಮಣ ಹೆಗಡೆಯವರು ಕೆಡಿಸಿಸಿ ಬ್ಯಾಂಕ್ ನ ಅತ್ಯುತ್ತಮ ಗ್ರಾಹಕರು ಇವರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು .

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವರು ಹಾಗೂ ಶಾಸಕರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶ್ರೀಕುಮಾರ್ ರೋಡ್ ಲೈನ್ಸ್ ಮತ್ತು ಟ್ರಾವೆಲ್ಸ್ ಅವರು ಅನೇಕ ವರ್ಷಗಳಿಂದ ಜನಸೇವೆ ಮಾಡುತ್ತಾ ಬಂದಿದ್ದು ಇವರ ಈ ಕಾರ್ಯ ಶ್ಲಾಘನೀಯ ಇದರ ಜೊತೆಗೆ ಸಾಮಾಜಿಕ ಕಾರ್ಯದಲ್ಲಿಯೂ ಶ್ರೀ ವೆಂಕಟ್ರಮಣ ಹೆಗಡೆಯವರು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು .

ಅಧ್ಯಕ್ಷತೆ ವಹಿಸಿದ್ದ ಸಂಕಲ್ಪ ಸೇವಾ ಸಂಸ್ಥೆ ಯಲ್ಲಾಪುರದ ಅಧ್ಯಕ್ಷರಾದ ಶ್ರೀ ಪ್ರಮೋದ್ ಹೆಗಡೆ ಮಾತನಾಡಿ ಇಂದಿನ ಕಾಲದಲ್ಲಿ ಜನರಿಗೆ ಕೆಲಸವಿಲ್ಲ ಆದರೆ ಕೆಲಸಕ್ಕೆ ಜನ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು .

ಈ ಸಂದರ್ಭದಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸುನೀಲ್ ನಾಯ್ಕ, ಕೆಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಭಾಸ್ಕರ ಹೆಗಡೆ ಕಾಗೇರಿ ,
ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಶ್ರೀ ಶಿವಾನಂದ ಹೆಗಡೆ ಕಡತೋಕಾ, ಆರ್,ಎಸ್,ಜೋಶಿ, ಶ್ರೀಕಾಂತ ಮೊಗೇರ ಸದಾನಂದ ಛಾತ್ರಾ ಇನ್ನಿತರರು ಹಾಜರಿದ್ದರು .

ಅನೇಕ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ,ಚಾಲಕರು ನಿರ್ವಾಹಕರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು .ಸಂಸ್ಥೆಯ ಮಾಲೀಕರಾದ ಶ್ರೀ ವೆಂಕಟ್ರಮಣ ಹೆಗಡೆ ಹಾಗೂ ಕುಟುಂಬದವರನ್ನು ಕಾರ್ಮಿಕರು ಹಾಗೂ ಅಭಿಮಾನಿಗಳು ಅಭಿನಂದಿಸಿದರು .
ಈ ಸಂದರ್ಭದಲ್ಲಿ ಅಪಾರ ಅಭಿಮಾನಿಗಳು ಸಾರ್ವಜನಿಕರು ಹಾಜರಿದ್ದರು . ಎಲ್ಲರಿಗೂ ಸಿಹಿಯ ಜೊತೆಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು.