Home Local ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ.

ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ.

SHARE

ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯ 94 ವಿದ್ಯಾರ್ಥಿಗಳಿಗೆ ಸರಕಾರದ ಯೋಜನೆಯ ಸೈಕಲ್ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕೆನರಾ ಎಜ್ಯುಕೇಶನ್ ಸೊಸೈಟಿಯ ಸದಸ್ಯ ಕೃಷ್ಣದಾಸ ಪೈ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ನಿಧಾನಗತಿಯಲ್ಲಿ ಸೈಕಲ್ ಸವಾರಿ ಮಾಡುವ ಮಹತ್ವವನ್ನು ಸಾರಲು ಸ್ಲೋ ಸೈಕಲ್ ರೇಸ್ ಸ್ಪರ್ಧೆ ಏರ್ಪಡಿಸಿ ಜಾಗೃತಿಗೊಳಿಸಲಾಯಿತು.

ಎಂಟನೆ ತರಗತಿಯ ಕುಮಾರಿ ಅಂಕಿತಾ ಗಾವಡಿ, ಕುಮಾರ ವಿಕಾಸ್ ಶೆಟ್ಟಿ ಒಂಭತ್ತನೆಯ ತರಗತಿಯ ಕುಮಾರ ಆದಿತ್ಯ ಪಟಗಾರ ಹಾಗೂ ಹತ್ತನೆಯ ತರಗತಿಯ ಕುಮಾರಿ ಪಲ್ಲವಿ ಹರಿಕಾಂತ ಮತ್ತು ಕುಮಾರ ಕೃಷ್ಣ ನಾಯ್ಕ ಪ್ರಥಮಿಗರಾಗಿ ಬಹುಮಾನ ಪಡೆದರು.

ಇದಕ್ಕೂ ಮೊದಲು ನಡೆದ ಪಾಲಕರ ಸ್ಫರ್ಧೆಯಲ್ಲಿ ವರ್ಗ ಶಿಕ್ಷಕರಾದ ವಿ.ಎನ್.ಭಟ್ಟ ಮತ್ತು ಎಲ್. ಎನ್. ಅಂಬಿಗ ವಿದ್ಯಾರ್ಥಿಗಳ ಶೈಕ್ಷಣ ಕ ಪ್ರಗತಿಯ ಬಗ್ಗೆ ಮಾತನಾಡಿದರು. ಪಾಲಕವರ್ಗದವರು ಮಕ್ಕಳ ಪರೀಕ್ಷಾ ಉತ್ತರ ಪತ್ರಿಕೆ ಪರ್ಯಾವಲೋಕಿಸಿದರು. ಮುಖ್ಯ ಶಿಕ್ಷಕ ಎನ್.ಆರ್.ಗಜು ಮಾತನಾಡಿ, ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಬೆಳವಣ ಗೆಗೆ ಪಾಲಕ ಮತ್ತು ಶಿಕ್ಷಕರ ಜವಾಬ್ದಾರಿ ದೊಡ್ಡದೆಂದು ಅಭಿಪ್ರಾಯಪಟ್ಟರಲ್ಲದೇ ಪಾಲಕರಿಂದ ಸಹಕಾರ ಕೋರಿದರು. ಶಿಕ್ಷಕ ಸುರೇಶ ಪೈ ಕಾರ್ಯಕ್ರಮದ ನೇತೃತ್ವವಹಿಸಿದ್ದರು.