Home Local ಕಾರವಾರದಲ್ಲಿ ಟಿಪ್ಪು ಜಯಂತಿ ಆಚರಣೆ: ನಡೆಯಿತು ವಿಶೇಷ ಉಪನ್ಯಾಸ

ಕಾರವಾರದಲ್ಲಿ ಟಿಪ್ಪು ಜಯಂತಿ ಆಚರಣೆ: ನಡೆಯಿತು ವಿಶೇಷ ಉಪನ್ಯಾಸ

SHARE

ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಜಿಲ್ಲಾ ರಂಗಮಂದಿರದಲ್ಲಿ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಉದ್ಘಾಟಿಸಿದರು. ಉಪನ್ಯಾಸಕಿ, ದಾಂಡೇಲಿಯ ವಿನಯಾ ಒಕ್ಕುಂದಾ ಅವರು ಟಿಪ್ಪು ಕುರಿತಾದ ವಿಶೇಷ ಉಪನ್ಯಾಸ ನೀಡಿದರು. ಟಿಪ್ಪುವಿನ ಕುರಿತಾದ ಜೀವನ ಹಾಗೂ ಅವರ ಕಾರ್ಯಗಳ ಕುರಿತಾಗಿ ಬೆಳಕು ಚೆಲ್ಲಲಾಯಿತು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ನಗರಸಭೆ ಪೌರಾಯುಕ್ತ ಯೋಗೀಶ್ವರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ನಾಯಕ ಹಾಜರಿದ್ದರು.