Home Local ಸೀಬರ್ಡ ಬಸ್ ಚಾಲಕನಿಗೆ ಥಳಿತ

ಸೀಬರ್ಡ ಬಸ್ ಚಾಲಕನಿಗೆ ಥಳಿತ

SHARE

ಅಂಕೋಲಾ : ಬೆಂಗಳೂರಿಗೆ ತೆರಳುತ್ತಿದ್ದ ಸೀಬರ್ಡ ಬಸ್‍ನ್ನು ಅಡ್ಡಗಟ್ಟಿ ಬೈಕ್‍ನಲ್ಲಿ ಬಂದ ಯುವಕರೀರ್ವರು ಚಾಲಕನಿಗೆ ಥಳಿಸಿದ ಘಟನೆ ಹಾರವಾಡದಲ್ಲಿ ನಡೆದಿದೆ.
ಈ ಬಸ್ಸ್ ಪಣಜಿಯಿಂದ ಬೆಂಗಳೂರಿಗೆ ಸಾಗುತ್ತಿತ್ತು. ಬೈಕನಲ್ಲಿ ಬಂದ ಯುವಕರೀರ್ವರು ಬಸ್ಸ್‍ನ್ನು ಅಡ್ಡಗಟ್ಟಿ ಚಾಲಕನೊಂದಿಗೆ ಅಸಂಭದ್ದವಾಗಿ ನಡೆದುಕೊಂಡು ಏಕಾಏಕಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಬಸ್ಸಿನ ಮುಂಬಾಗದ ಗ್ಲಾಸನ್ನು ಒಡೆದು ಅಲ್ಲಿಂದ ಪರಾರಿಯಾಗಿದ್ದಾರೆ.
ಹಲ್ಲೆ ನಡೆಸಿದ ಯುವಕರೊಂದಿಗೆ ಇನ್ನೂ ಆರು ಯುವಕರು 3 ಬೈಕುಗಳಲ್ಲಿ ಇದ್ದರು ಎಂದು ತಿಳಿದಿದೆ.
ಹಲ್ಲೆಗೊಳಗಾದ ಸೀಬರ್ಡ ಬಸ್ ಚಾಲಕ ಪ್ರಶಾಂತ ಅಕ್ಕಿ ಅಂಕೋಲಾ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.