Home Local ಕುಮಟಾದ ಬರ್ಗಿಯಲ್ಲಿ ೧೩ ಫಲಾನುಭವಿಗಳಿಗೆ ಉಚಿತ ಅಡಿಗೆ ಅನಿಲ ಸಿಲೆಂಡರ್ ಹಾಗೂ ಸಲಕಲರಣೆಗಳ ವಿತರಣೆ.

ಕುಮಟಾದ ಬರ್ಗಿಯಲ್ಲಿ ೧೩ ಫಲಾನುಭವಿಗಳಿಗೆ ಉಚಿತ ಅಡಿಗೆ ಅನಿಲ ಸಿಲೆಂಡರ್ ಹಾಗೂ ಸಲಕಲರಣೆಗಳ ವಿತರಣೆ.

SHARE

ಕುಮಟಾ: ತಾಲೂಕಿನ ಬರ್ಗಿಯಲ್ಲಿ ೧೩ ಫಲಾನುಭವಿಗಳಿಗೆ ಉಚಿತ ಅಡಿಗೆ ಅನಿಲ ಸಿಲೆಂಡರ್ ಹಾಗೂ ಸಲಕಲರಣೆಗಳನ್ನು ವಿತರಿಸಲಾಯಿತು.

ಕುಮಟಾ ಹೊನ್ನಾವರ ವಿಧಾನಸಭಾ ಮಾನ್ಯ ಶಾಸಕರಾದ ಶ್ರೀ ದಿನಕರ ಕೆ. ಶೆಟ್ಟಿ ಯವರು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ೧೩ ಫಲಾನುಭವಿಗಳಿಗೆ ಉಚಿತ ಅಡಿಗೆ ಅನಿಲ ಸಿಲೆಂಡರ್ ಹಾಗೂ ಸಲಕಲರಣೆಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ 2011ರ ಸಾಮಾಜಿಕ ಆರ್ಥಿಕ ಜಾತಿ ಗಣತಿ ಪಟ್ಟಿಯಲ್ಲಿ ಗುರುತಿಸಿರುವ ಫಲಾನು ಭವಿಗಳಿಗೆ ಉಜ್ವಲ ಯೋಜನೆಯಡಿಯಲ್ಲಿ ಉಚಿತವಾಗಿ ಅನಿಲ ಸಂಪರ್ಕವನ್ನು ಕೇಂದ್ರ ಸರ್ಕಾರ ನೀಡುತ್ತಿದೆ ,ಇದರ ಸದುಪಯೋಗವನ್ನು ಪಡೆಯುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ತಾಲೂಕು ಅಧ್ಯಕ್ಷರಾದ ಶ್ರೀ ಕುಮಾರ ಮಾರ್ಕಂಡೇ ಹಾಗೂ ಪಾರ್ಟಿ ಪ್ರಮುಖರಾದ ಶ್ರೀ ಅಶೋಕ ಪ್ರಭು ಮುಂತಾದವರು ಉಪಸ್ಥಿತರಿದ್ದರು