Home Local ಬಿಗಿ ಬಂದೋಬಸ್ತ ನಡುವೆ ಶಿರಸಿಯಲ್ಲಿ ಟಿಪ್ಪು ಜಯಂತಿ ಆಚರಣೆ: ಮೆರವಣಿಗೆ ನಡೆಸಿ ಘೋಷಣೆ ಕೂಗಲು ಯತ್ನಿಸಿದವರ...

ಬಿಗಿ ಬಂದೋಬಸ್ತ ನಡುವೆ ಶಿರಸಿಯಲ್ಲಿ ಟಿಪ್ಪು ಜಯಂತಿ ಆಚರಣೆ: ಮೆರವಣಿಗೆ ನಡೆಸಿ ಘೋಷಣೆ ಕೂಗಲು ಯತ್ನಿಸಿದವರ ಬಂಧನ.

SHARE

ಶಿರಸಿ:ಇಲ್ಲಿನ ಯಲ್ಲಾಪುರ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ನಗರಸಭೆ ಹಾಗೂ ತಾಲ್ಲೂಕು ಪಂಚಾಯತ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಟಿಪ್ಪು ಜಯಂತಿ ಹಮ್ಮಿಕೊಳ್ಳಲಾಗಿತ್ತು.ಆದರೆ ಬಿಗಿ ಪೊಲೀಸ್ ಹಾಗೂ ಬ್ಯಾರಿಕೇಡ್ ಬಂದೋಬಸ್ತಿನಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಯಿತು.‌

ಜಯಂತಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತ ರಾಜು ಮೊಗವೀರ, ಇತಿಹಾದಿಂದ ಟಿಪ್ಪುವಿನ ಆಳ್ವಿಕೆಯನ್ನು ನೋಡಿ ಕಲಿಯಬೇಕಾಗಿದೆ. ಸದೃಢ ರಾಜ್ಯ ಕಟ್ಟಲು ಉತ್ತಮ‌ ಆರ್ಥಿಕ ವ್ಯವಸ್ಥೆ, ನೀರಾವರಿ ವ್ಯವಸ್ಥೆ, ಉತ್ತಮ ವ್ಯಾಪಾರ ವಹಿವಾಟು, ರಸ್ತೆ ಹೀಗೆ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ವಿಚಾರ ಮಾಡಿದ ರಾಜ ಟಿಪ್ಪುವಾಗಿದ್ದು , ಅವರ ಬಗ್ಗೆ ತಿಳಿಯಲು ಬೇಕಾದ ಪುಸ್ತಕಗಳೂ ಸಹ ಲಭ್ಯವಿದ್ದು, ಅದನ್ನು ಓದಿದಲ್ಲಿ ಗತಿಸಿ ಹೋದ ರಾಜನ ಬಗ್ಗೆ ಈಗಿನ ಕಾಲದಲ್ಲಿ ತಿಳಿಯಲು ಅನುಕೂಲವಾಗುತ್ತದೆ ಎಂದ ಅವರು, ಭಾರತೀಯರ ಕನ್ನಡಿಗರ ಅಭಿಮಾನಕ್ಕೆ ಇಂಬುಕೊಟ್ಟ ಘಟನೆ ಟಿಪ್ಪುವಿಗೆ ಸೇರುತ್ತದೆ ಎಂದರು.

ಮೆರವಣಿಗೆ ನಡೆಸಿದವರ ಬಂಧನ
ಜಿಲ್ಲೆಯಾದ್ಯಂತ ಸೆಕ್ಷನ್.144 ಜಾರಿ ಮಾಡಿ ಮೆರವಣಿಗೆ ಹಾಗೂ ಘೋಷಣೆ ಕೂಗುವುದುನ್ನು ನಿಷೇಧಗೊಳಿಸಿದ್ದರೂ ಸಭಾ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಟಿಪ್ಪು ಅಭಿಮಾನಿಗಳು ದ್ವಿಚಕ್ರ ವಾಹನದಲ್ಲಿ ಮೆರವಣಿಗೆ ನಡೆಸಿ, ಘೋಷಣೆಗಳನ್ನು ಕೂಗಿದ ಹಿನ್ನಲೆಯಲ್ಲಿ ಸುಮಾರು 6 ಜನರನ್ನು ಬಂಧಿಸಿ ಠಾಣೆಗೆ ಕಳಿಸಲಾಯಿತು. ತಕ್ಷಣವೇ ದ್ವಿಚಕ್ರ ವಾಹನಗಳನ್ನೂ ವಶಪಡಿಸಿಕೊಂಡು ಪೊಲೀಸರು ಕ್ರಮ ಕೈಗೊಂಡರು.