Home Local ನಾವು ನಮ್ಮಿಷ್ಟ ಫೇಸಬುಕ್ ಗ್ರೂಪ್ ನ ಐದನೇ ವಾರ್ಷಿಕ ಸ್ನೇಹ ಸಮ್ಮೇಳನ : ಸಂಯೋಜನೆಗೊಂಡಿದೆ “ಸ್ನೇಹ...

ನಾವು ನಮ್ಮಿಷ್ಟ ಫೇಸಬುಕ್ ಗ್ರೂಪ್ ನ ಐದನೇ ವಾರ್ಷಿಕ ಸ್ನೇಹ ಸಮ್ಮೇಳನ : ಸಂಯೋಜನೆಗೊಂಡಿದೆ “ಸ್ನೇಹ ದೀಪ”

SHARE

ಹೊನ್ನಾವರ : ಪ್ರತಿ ವರ್ಷದಂತೆ ಈ ವರ್ಷವೂ “ನಾವು ನಮ್ಮಿಷ್ಟ ” ಫೇಸಬುಕ್ ಗ್ರೂಪ್ ನ ಐದನೇ ವಾರ್ಷಿಕ ಸ್ನೇಹ ಸಮ್ಮೇಳನ “ಸ್ನೇಹ ದೀಪ 2018” ನವೆಂಬರ್ 11 ರಂದು ಕುಮಟಾ ಹೊನ್ನಾವರ ನಡುವೆ ಹಳದೀಪುರ ಸಮೀಪದ ಗೋಗ್ರೀನ್ ನಲ್ಲಿ ನಡೆಯಲಿದೆ.

ನಾವು ನಮ್ಮಿಷ್ಟ ಇದೊಂದು ದಿನವಿಡಿ ವ್ಯಾಪಾರ, ಉದ್ಯೋಗ, ಕೃಷಿ -ವಹಿವಾಟುಗಳಲ್ಲಿ ನಿರತರಾದವರು ಸಮಯ ಸಿಕ್ಕಾಗ ಖುಷಿ ಖುಷಿಯಾಗಿ ಹರಟೆ ಹೊಡೆಯುವ ಹವ್ಯಕರ ಫೇಸ್ ಬುಕ್ ಗ್ರೂಪ್ ಆಗಿದೆ . ಇದರ ಸದಸ್ಯರು ಈ ಸ್ನೇಹ ದೀಪ 2018 ನ್ನು ಸಂಯೋಜಿಸಿದ್ದಾರೆ.

ಸ್ನೇಹ ದೀಪ 2018ರಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ ಕಲೆ , ಸಂಸ್ಕೃತಿಯ ಅನಾವರಣವಾಗಲಿದೆ . ಅಲ್ಲದೆ ಇದರ ಜೊತೆಗೆ ಹವ್ಯಕರ ಸಾಂಪ್ರದಾಯಿಕ ಊಟ ,ತಿಂಡಿ ಸಮಾರಾಧನೆಗೆ ವ್ಯವಸ್ಥೆ ಮಾಡಲಾಗಿದೆ .


ಗ್ರೂಪಿನಲ್ಲಿರುವ ಸದಸ್ಯರ ಕುಟುಂಬದವರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ . ಚಿಕ್ಕ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಲಾಗಿದೆ . ಜೊತೆಗೆ ಅಂದು ಬೋಟಿಂಗ್ ಮತ್ತೊಂದು ಆಕರ್ಷಣೆಯಾಗಿದೆ. ಬೆಂಗಳೂರು, ಮಂಗಳೂರು, ಶಿವಮೊಗ್ಗ ,ಹುಬ್ಬಳ್ಳಿ ಹೀಗೆ ರಾಜ್ಯದ ವಿವಿಧ ಕಡೆಯಿಂದ ಹಾಗೂ ಹೊರ ರಾಜ್ಯದಲ್ಲಿ ನೆಲೆಸಿರುವ ಗ್ರೂಪಿನ ಸದಸ್ಯರು ಅಂದು ಮುಖಾಮುಖಿಯಾಗಲಿದ್ದಾರೆ .

ಮಧ್ಯಾಹ್ನ 2:30 ರಿಂದ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ ,ಇವರಿಂದ ಯಕ್ಷಗಾನ ಪ್ರದರ್ಶನ ಇದೆ . ಸರ್ವೇಶ್ವರ ಹೆಗಡೆ ಮೂರೂರು, ಶಂಕರ್ ಭಾಗವತ್ ,ಸುಬ್ರಹ್ಮಣ್ಯ ಚಿಟ್ಟಾಣಿ ,ಕಾರ್ತಿಕ ಚಿಟ್ಟಾಣಿ ಮತ್ತಿತರ ಕಲಾವಿದರು ಭಾಗವಹಿಸಲಿದ್ದಾರೆ. ಭರತನಾಟ್ಯ, ನಾಟಕ ಪ್ರದರ್ಶನವೂ ಇದೆ.

ಧಾರ್ಮಿಕ ಕಾರ್ಯಕ್ರಮದೊಂದಿಗೆ ಸ್ನೇಹ ದೀಪ ಆರಂಭವಾಗಲಿದೆ. ಗ್ರೂಪ್ ನ ಅಡ್ಮಿನ್ ಆಗಿರುವ ಕಡತೋಕ ಸೂರ್ಯ ನಾರಾಯಣ ಹೆಗಡೆ ಹಾಗೂ ಶಿರಸಿಯ ಸಾವಿತ್ರಿ ರಮೇಶ್ ಇವರುಗಳು ಸದಸ್ಯರ ಸಹಕಾರದಲ್ಲಿ ಯಶಸ್ವಿಯಾಗಿ ಸ್ನೇಹ ಸಮ್ಮೇಳನವನ್ನು ಸಂಘಟಿಸುತ್ತಿದ್ದಾರೆ.

ಅವಿಭಕ್ತ ಕುಟುಂಬದ ಪರಿಕಲ್ಪನೆಯೇ ಮಾಯವಾಗಿರುವ ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಹೊಸ ರೀತಿಯ ಕುಟುಂಬದ ವ್ಯವಸ್ಥೆ ಹುಟ್ಟಿಕೊಳ್ಳುತ್ತಿದ್ದು, ಈ ಗ್ರೂಪ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಫೇಸ್ ಬುಕ್ ನಲ್ಲಿ ದೊರೆತ ಆತ್ಮೀಯರೊಂದಿಗೆ ಮುಖತ ಭೇಟಿಯಾಗಿ ತಮ್ಮ ತಮ್ಮ ಕುಟುಂಬದ ಸದಸ್ಯರೆಲ್ಲ ಸೇರಿ ವಿಶಾಲ ಕುಟುಂಬವಾಗಿ ದಿನವಿಡೀ ಕಳೆಯಲು ಇದೊಂದು ಉತ್ತಮ ಅವಕಾಶವಾಗಿದೆ ಎಂದು ಗ್ರೂಪ್ ನ ಅಡ್ಮಿನ್ ಆಗಿರುವ ಸೂರ್ಯನಾರಾಯಣ ಹೆಗಡೆಯವರು ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.