Home Food ಪೌಷ್ಟಿಕಾಂಶಗಳಿಂದ ಕೂಡಿದ ಮಿಕ್ಸ್ ವೆಜಿಟೆಬಲ್ ಕೂರ್ಮ..!!

ಪೌಷ್ಟಿಕಾಂಶಗಳಿಂದ ಕೂಡಿದ ಮಿಕ್ಸ್ ವೆಜಿಟೆಬಲ್ ಕೂರ್ಮ..!!

SHARE

ಇದು ಹಲವಾರು ತರಕಾರಿಗಳ ಸಮ್ಮಿಲನವಾಗಿದ್ದು ಪೌಷ್ಟಿಕಾಂಶಗಳಿಂದ ತುಂಬಿರುತ್ತದೆ. ಇದು ಚಪಾತಿ ಮತ್ತು ಪೂರಿ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಇದನ್ನು ಮನೆಯಲ್ಲಿಯೇ ಮಾಡದಬಹುದು. ಇದನ್ನು ಹೇಗೆ ಮಾಡೋದು ? ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿಗಳು:

ಮಿಕ್ಸ್ ವೆಜಿಟೆಬಲ್ಸ್ 2 ಕಪ್ (ಬೀನ್ಸ್, ಕ್ಯಾರಟ್, ಆಲೂಗಡ್ಡೆ,ಕಾಲಿ ಫ್ಲವರ್, ಹಸಿ – ಬಟಾಣಿ)
ಸಣ್ಣಗೆ ಹೆಚ್ಚಿದ ಈರುಳ್ಳಿ 2
ಒಗ್ಗರಣೆ ಸೊಪ್ಪು ಸ್ವಲ್ಪ.
ಟೊಮೇಟೊ ಪ್ಯೂರಿ 2 ಕಪ್
ಕೆಂಪು ಮೆಣಸಿನ ಪುಡಿ 1 ಚಮಚ
ಧನಿಯಾ ಪುಡಿ 1 ಚಮಚ
ಅರಿಶಿಣ ಪುಡಿ ಚಿಟಿಕೆ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 2 ಚಮಚ

ಮಸಾಲಾ ಪೇಸ್ಟ್ ಮಾಡುವ ವಿಧಾನ:

ತೆಂಗಿನ ತುರಿ 2 ಚಮಚ
ಗೋಡಂಬಿ 10
ಗಸಗಸೆ 2 ಚಮಚ
ಹಸಿ- ಮೆಣಸಿನ ಕಾಯಿ 2
ಸೋಂಪು 3/4 ಚಮಚ
ಲವಂಗ 2
ಚಕ್ಕೆ 2 ಇಂಚು
ಏಲಕ್ಕಿ 2

ಇದೆಲ್ಲವನ್ನು ರುಬ್ಬಿಕೊಳ್ಳಬೇಕು. ಅಂದರೆ ಪೇಸ್ಟ ಮಾಡಿಕೊಳ್ಳಿ.

ಮಾಡುವ ವಿಧಾನ:

1. ತರಕಾರಿಗಳನ್ನು ಕತ್ತರಿಸಿ ಬೇಯಿಸಿಕೊಳ್ಳಬೇಕು.

2. ಮಸಾಲೆ ಪದಾರ್ಥ ಗಳನ್ನು ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಬೇಕು.

3. ಬಾಣಲೆ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಬೇಕು. ಎಣ್ಣೆ ಕಾದ ನಂತರ
ಈರುಳ್ಳಿ ಮತ್ತು ಕರಿಬೇವು ಹಾಕಬೇಕು.

4. ಈರುಳ್ಳಿ ಕಂದು ಬಣ್ಣಕ್ಕೆ ಬಂದ ನಂತರ ಟೊಮೇಟೊ ಪ್ಯೂರಿ ಮತ್ತು

5. ಮಸಾಲೆ ಪುಡಿಗಳನ್ನು ಸೇರಿಸಿ ಎಣ್ಣೆ ಹೊರ ಬಿಡುವ ವರೆಗೆ ಫ್ರೈ ಮಾಡಬೇಕು.

6. ನಂತರ ಬೇಯಿಸಿದ ತರಕಾರಿಗಳನ್ನು ಹಾಕಬೇಕು.

7. ತರಕಾರಿ ಹಾಕಿ 5 ನಿಮಿಷದ ನಂತರ ರುಬ್ಬಿದ ಮಸಾಲೆ, ತರಕಾರಿ ಬೇಯಿಸಿದ ನೀರು, ಉಪ್ಪು ಹಾಕಿ 10 ನಿಮಿಷ ಕುದಿಸಬೇಕು.

8. ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಚಪಾತಿ ಅಥವಾ ಪುರಿ ಜೊತೆ ಸರ್ವ್ ಮಾಡಬೇಕು.