Home Important ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಣೆಗೆ ತಡೆ.

ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಣೆಗೆ ತಡೆ.

SHARE

ಶ್ರೀರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಪ್ರಕರಣದಲ್ಲಿ‌ ನ್ಯಾಯಮೂರ್ತಿ ಕೊಠಾರಿ ಅವರು ಮುಂದಿನ ವಿಚಾರಣೆ ನಡೆಸದಂತೆ‌ ತಡೆ ನೀಡಿ ತೀರ್ಪಿತ್ತಿದ್ದಾರೆ.

ಶ್ರೀ ರಾಮಚಂದ್ರಾಪುರ ಮಠದ ವಿರುದ್ದ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಾಗೂ ಮಠದ ಆಡಳಿತಕ್ಕೆ ಆಡಳಿತಾಧಿಕಾರಿ ನೇಮಿಸುವ ಬಗ್ಗೆ ಕೋರ್ಟನಲ್ಲಿ ವಿಚಾರಣೆ ನಡೆಯುತ್ತಿತ್ತು. ಮಠಕ್ಕೆ ಆಡಳಿತಾಧಿಕಾರಿ ನೇಮಕದ ಬಗ್ಗೆ ಮಠದ ಭಕ್ತರು ತೀರ್ವ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಕುರಿತಾಗಿ ಕೋರ್ಟನ ಮೆಟ್ಟಿಲೇರಿದ್ದರು. ಅದಲ್ಲದೇ ಮಠಕ್ಕೆ ಆಡಳಿತಾಧಿಕಾರಿ ನೇಮಕದ ಬಗ್ಗೆ ಹೇಳಿಕೆಗಳು ಹೊರ ಬಿದ್ದಿದ್ದ ಸಂದರ್ಭದಲ್ಲಿಯೇ ಭಕ್ತರು ಶಪಥ ಪರ್ವ ಎಂಬ ಉಪವಾಸದ ಹಾಗೂ ಬ್ರಹತ್ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಕರಣಕ್ಕೆ ಸಂಬಂಧಿಸಿ ಈಗ ನ್ಯಾಯಮೂರ್ತಿ ಕೊಠಾರಿ ಅವರು ಮುಂದಿನ ವಿಚಾರಣೆ ನಡೆಸದಂತೆ‌ ತಡೆ ನೀಡಿ ತೀರ್ಪು ನೀಡಿದ್ದಾರೆ.