Home Important ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ಸ್ವಾಸ್ಥ್ಯ ಮಂಗಲ ಕಾರ್ಯಕ್ರಮ

ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ಸ್ವಾಸ್ಥ್ಯ ಮಂಗಲ ಕಾರ್ಯಕ್ರಮ

SHARE

ಶ್ರೀ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಮುಳ್ಳೇರ್ಯ ಮಂಡಲಾಂತರ್ಗತ ಚಂದ್ರಗಿರಿ ಹವ್ಯಕ ವಲಯ ಮಾತೃ ವಿಭಾಗದ ಸಹಯೋಗದಲ್ಲಿ ‘ ಸ್ವಾಸ್ಥ್ಯ ಮಂಗಲ ‘ ಮತ್ತು ಶ್ರೀಕಾರ್ಯಕರ್ತೆಯರ ಸಭಾ ಕಾರ್ಯಕ್ರಮವು ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ಸಂಪನ್ನವಾಯಿತು.
ಶ್ರೀ ಕ್ಷೇತ್ರ ಅರ್ಚಕರಾದ ಶ್ರೀ ಅನಂತಪದ್ಮನಾಭ ಮಯ್ಯ ಅವರು ದೀಪಜ್ವಲನ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗುರುವಂದನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಬಳಿಕ ಕುಂಕುಮಾರ್ಚನೆ ಮತ್ತು ಶಿವಪಂಚಾಕ್ಷರೀ ಸ್ತೋತ್ರ ಪಠಣ ನಡೆಯಿತು. ಮಧ್ಯಾಹ್ನ ಮಹಾ ಪೂಜೆ, ಅನ್ನಪ್ರಸಾದದ ನಂತರ ಸಭಾಕಾರ್ಯಕ್ರಮ ನಡೆಯಿತು.
ಗೋವಿಂದಬಳ್ಳಮೂಲೆ ‘ ಸಂಘಟನೆ ಮತ್ತು ಅಂತರ್ಜಾಲದ ಸಮರ್ಥವಾದ ಸದ್ಬಳಕೆ ಮತ್ತು ಅನಿವಾರ್ಯತೆಯ ಬಗ್ಗೆ ಸಮಗ್ರ ಮಾಹಿತಿಗಳನ್ನು ನೀಡಿದರು. ವಲಯ ಸಹಾಯ ಪ್ರಧಾನ ಡಾ// ಶಿವಕುಮಾರ್ ಅಡ್ಕ ಅವರು ಶ್ರೀ ಮಠದ ಅಮೃತಸತ್ವದ ಯೋಜನೆಯಂತೆ ಆಹಾರ ಆರೋಗ್ಯ ಎಂಬ ವಿಷಯವನ್ನು ಸಂವಾದದ ಮೂಲಕ ಪರಿಣಾಮಕಾರಿಯಾಗಿ ತಿಳಿಯಪಡಿಸಿದರು.
ಮಂಡಲ ಮುಷ್ಥಿ ಅಕ್ಕಿ ಪ್ರಧಾನೆ ಗೀತಾಲಕ್ಷ್ಮಿ ಮುಳ್ಳೆರ್ಯ ಅವರು ಮಾತೃ ವಿಭಾಗದ ಕಾರ್ಯ ಯೋಜನೆ ಬಗ್ಗೆ ವಿವರಣೆಯನ್ನಿತ್ತರು.
ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಸುಪ್ರಸಿದ್ಧ ನಾಟೀ ವೈದ್ಯ ವೆಂಕಟ್ರಾಮ ದೈತೋಟ ಅವರ ಬಗ್ಗೆ ಸಂತಾಪ ಸೂಚನೆಯನ್ನು ಮೌನಪ್ರಾರ್ಥನೆಯೊಂದಿಗೆ ವ್ಯಕ್ತಪಡಿಸಲಾಯಿತು.
ವಲಯ ಕಾರ್ಯದರ್ಶಿ ರಾಜಗೋಪಾಲ ಕೈಪ್ಪಂಗಳ ಅವರು ಪ್ರಸ್ಥಾವನೆ ಮಾಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕ್ಷೇತ್ರ ಮೇನೇಜರ್ ಶ್ರೀ ಸೀತಾರಾಮ ಬಳ್ಳುಳ್ಳಾಯ ಅವರು ಪೂರ್ಣ ಸಹಕಾರಗಳನ್ನಿತ್ತರು.
ವಲಯ ಪದಾಧಿಕಾರಿಗಳು, ಗುರಿಕ್ಕಾರರು, ಶ್ರೀಕಾರ್ಯಕರ್ತೆಯರು ಉಪಸ್ಥಿತರಿದ್ದರು.