Home Local ಗೋಕರ್ಣ ರಾಮತೀರ್ಥದ ಗುಡ್ಡದ ಮೇಲೆ ಬೆಂಕಿ : ಕೆಲಕಾಲ ಗೊಂದಲ

ಗೋಕರ್ಣ ರಾಮತೀರ್ಥದ ಗುಡ್ಡದ ಮೇಲೆ ಬೆಂಕಿ : ಕೆಲಕಾಲ ಗೊಂದಲ

SHARE

ಗೋಕರ್ಣ: ಇಲ್ಲಿನ ರಾಮತೀರ್ಥದ ಗುಡ್ಡದ ಮೇಲೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ನಾಪತ್ತೆಯಾಗಿದ್ದಾರೆ.ಇದರಿಂದಾಗಿ 5 ಎಕರೆಯಷ್ಟು ಜಾಗ ಬೆಂಕಿಗೆ ಆಹುತಿಯಾಗಿದೆ.

ವಿಷಯ ತಿಳಿದ ತಕ್ಷಣ ಗೋಕರ್ಣ ಪೊಲೀಸ್ ಠಾಣೆಯ ಸಿಬ್ಬಂದಿ ಸಚಿನ್ ನಾಯಕ‌, ತಿಮ್ಮಪ್ಪ ಮೊಗೇರ ಹಾಗೂ ಕೆಲ ವಿದೇಶಿಗರು ಕೂಡಲೆ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿ ಅಘಡಗಳೆಲ್ಲ ಸಂಭವಿಸಿದಾಗಲೆಲ್ಲ ಕುಮಟಾದಿಂದ ಅಗ್ನಿಶಾಮಕ ದಳದ ವಾಹನವನ್ನು ಕರೆಯಿಸಬೇಕಾಗಯವುದರಿಂದ ಅವಘಡಗಳಿಂದ ಅನಾಹುತ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಭಯ ಜನರನ್ನು ಆವರಿಸಿದೆ. ಹೀಗಾಗಿ, ಉಪ ಅಗ್ನಿಶಾಮಕ ಠಾಣೆ ಅಥವಾ ಅಗ್ನಿಶಾಮಕ ದಳದ ವಾಹನವನ್ನು ಗೋಕರ್ಣ ವ್ಯಾಪ್ತಿಗೆ ನೀಡಬೇಕನ್ನುವುದು ಇಲ್ಲಿಯ ಜನರ ಆಗ್ರಹ