Home Information ಜಿಲ್ಲಾ ಸಾಹಿತ್ಯ ಸಮ್ಮೇಳನ : ಪುಸ್ತಕ ಮಳಿಗೆಗೆ ಆಹ್ವಾನ

ಜಿಲ್ಲಾ ಸಾಹಿತ್ಯ ಸಮ್ಮೇಳನ : ಪುಸ್ತಕ ಮಳಿಗೆಗೆ ಆಹ್ವಾನ

SHARE

ಕಾರವಾರ: ಯಲ್ಲಾಪುರದಲ್ಲಿ ಡಿ.22 ಮತ್ತು 23 ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಾರಾಟಕ್ಕಾಗಿ ಮಳಿಗೆ ಅಗತ್ಯವಿರುವ ಪ್ರಕಾಶಕರು ಡಿ.20 ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

ಮಳಿಗೆಗೆ ಎರಡು ಮೇಜು ಮತ್ತು ಕುರ್ಚಿ ನೀಡಲಾಗುತ್ತಿದ್ದು, ರೂ.250 ಶುಲ್ಕ ವಿಧಿಸಲಾಗುವುದು. ಮಳಿಗೆ ಅಗತ್ಯವಿದ್ದವರು ವೇಣುಗೋಪಾಲ ಮದ್ಗುಣಿ, ಅಧ್ಯಕ್ಷರು, ತಾಲೂಕು ಕ.ಸಾ.ಪ. ಯಲ್ಲಾಪುರ, ಮೊಬೈಲ್ ಸಂಖ್ಯೆ 9448408602 ಸಂಪರ್ಕಿಸಬಹುದು ಎಂದು ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.