Home Local ಗೋಕರ್ಣ ತಾಮ್ರಪರ್ಣಿಯಲ್ಲಿ ಲೀನವಾದ ಅನಂತಕುಮಾರ ಚಿತಾಭಸ್ಮ: ಧಾರ್ಮಿಕ ಕಾರ್ಯ ನೆರವೇರಿಸಿದ ಶಾಸಕ ಕಾಗೇರಿ

ಗೋಕರ್ಣ ತಾಮ್ರಪರ್ಣಿಯಲ್ಲಿ ಲೀನವಾದ ಅನಂತಕುಮಾರ ಚಿತಾಭಸ್ಮ: ಧಾರ್ಮಿಕ ಕಾರ್ಯ ನೆರವೇರಿಸಿದ ಶಾಸಕ ಕಾಗೇರಿ

SHARE

ಗೋಕರ್ಣ: ಇತ್ತೀಚಿಗೆ ನಿಧನರಾಧ ಕೇಂದ್ರ ಸಚಿವ ಎಚ್.ಎನ್.ಅನಂತಕುಮಾರ ಚಿತಾಭಸ್ಮವನ್ನು ಶನಿವಾರ ಧಾರ್ಮಿಕ ವಿಧಿವಿಧಾನದೊಂದಿಗೆ ಇಲ್ಲಿನ ತಾಮ್ರಪರ್ಣಿಯಲ್ಲಿ ವಿಸರ್ಜಿಸಲಾಯಿತು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಧಾರ್ಮಿಕ ಕಾರ್ಯವನ್ನ ಇಲ್ಲಿನ ಕೋಟಿತೀರ್ಥದಲ್ಲಿ ನೆರವೇರಿಸಿದರು. ಬಳಿಕ ಇಲ್ಲಿನ ತಾಮ್ರಗೌರಿ ದೇವಸ್ಥಾನದ ಬಳ ಇರುವ ತಾಮ್ರಪರ್ಣಿಯಲ್ಲಿ ವಿಸರ್ಜಿಸಲಾಯಿತು. ಪೋರೋಹಿತರಾದ ವೇ. ವಿನಾಯಕ ರಮಣಿಪ್ರಸಾದ ಮತ್ತು ವಿಘ್ನೇಶ್ವರ ಜೋಶಿ ಧಾರ್ಮಿಕ ವಿಧಿಯನ್ನು ನೆರವೇರಿಸಿಕೊಟ್ಟರು.

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ. ಬಿ.ಜೆ.ಪಿ.ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ವಿನೋದ ಪ್ರಭು ಆರ.ಡಿ. ಹೆಗಡೆ,ನ್ಯಾಯವಾದಿ ನಾಗರಾಜ ನಾಯಕ ,ಭಾಸ್ಕರ ನಾರ್ವೇಕರ, ಸ್ಥಳೀಯ ಮುಖಂಡರಾದ ಕುಮಾರ ಮಾರ್ಕಾಂಡೆ, ಹಿರಿಯ ಮುಖಂಡ ಎಸ್.ವಿ. ಜಠಾರ , ಬಿ.ಜೆ.ಪಿ. ಜಿಲ್ಲಾಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಜನ್ನು , ನಾಗರಾಜ ನಾಯಕ ತೊರ್ಕೆ, ಜಯರಾಮ ಹೆಗಡೆ ಸೇರಿದಂತೆ ಎಲ್ಲಾ ಬಿ.ಜೆ.ಪಿ.ಸದಸ್ಯರು ಉಪಸ್ಥಿತರಿದ್ದರು