Home Important ಇಂಡಿಗೋ :ಹುಬ್ಬಳ್ಳಿಯಿಂದ ದೇಶದ ಪ್ರಮುಖ ನಗರಗಳಿಗೆ ಹಾರಾಟ ಶುರು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ.

ಇಂಡಿಗೋ :ಹುಬ್ಬಳ್ಳಿಯಿಂದ ದೇಶದ ಪ್ರಮುಖ ನಗರಗಳಿಗೆ ಹಾರಾಟ ಶುರು, ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ.

SHARE

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಿಂದಾಗಿ ದೇಶದ ಪ್ರಮುಖ ನಗರಗಳಿಗೆ ಹಾರಾಟ ಶುರು ಮಾಡಿದ್ದ ಇಂಡಿಗೋ ಇನ್ನೂ ಎತ್ತರಕ್ಕೆ ಹಾರಲು ಮುಂದಾಗಿದೆ. ಹುಬ್ಬಳ್ಳಿಯಿಂದ ಚೆನ್ನೈ, ಬೆಂಗಳೂರು, ಕೊಚ್ಚಿ ಮಾರ್ಗವಾಗಿ ಹತ್ತಾರು ದೇಶಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಈ ಭಾಗದ ಜನರ ಸಂತಸ ಇಮ್ಮಡಿಗೊಳಿಸಿದೆ. ಉಡಾನ್ ಯೋಜನೆ ಜತೆ ಜತೆಗೆ ಇಂಡಿಗೋ ವಿಮಾನಯಾನ ಸಂಸ್ಥೆ ಹುಬ್ಬಳ್ಳಿಯಿಂದ ದುಬೈ, ಅಬುದಾಬಿ, ದೋಹಾ, ಕುವೈತ್ ,ಮಸ್ಕತ್, ಸಿಂಗಪುರ,ಹಾಂಕಾಂಗ್, ಬ್ಯಾಂಕಾಕ್, ಮಾಲೆ ಹಾಗೂ ಶ್ರೀಲಂಕಾದ ಕೊಲೊಂಬೆಗೆ ಸಂಪರ್ಕ ಅಭಿವೃದ್ಧಿಪಡಿಸಿದೆ.

ಹುಬ್ಬಳ್ಳಿಯಿಂದ ವಿದೇಶಕ್ಕೆ ಯಾವುದೇ ನೇರ ವಿಮಾನ ಇಲ್ಲ. ಆದರೆ, ಹುಬ್ಬಳ್ಳಿ ಮೂಲಕ ಬೆಂಗಳೂರು, ಚೆನ್ನೈ, ಕೊಚ್ಚಿ ಮತ್ತಿತರ ಮಹಾನಗರ ಮಾರ್ಗದಿಂದ ವಿದೇಶಕ್ಕೆ ಹಾರಾಟ ನಡೆಸಲಿವೆ. ಹುಬ್ಬಳ್ಳಿ ಮೂಲಕ ಚೆನ್ನೈ ಮಾರ್ಗವಾಗಿ ಬ್ಯಾಂಕಾಕ್, ಅಹ್ಮದಾಬಾದ್ ಮಾರ್ಗವಾಗಿ ದುಬೈಗೆ,ಬೆಂಗಳೂರು ಮಾರ್ಗವಾಗಿ ದುಬೈಗೆ, ಬೆಂಗಳೂರು ಮಾರ್ಗವಾಗಿ ಹಾಂಕಾಂಗ್ ಹಾಗೂ ಸಿಂಗಪುರಕ್ಕೆ ಕೊಚ್ಚಿ ಮಾರ್ಗವಾಗಿ ಮಾಲೆ ಹಾಗೂ ಅಬುದಾಬಿ , ಮಸ್ಕತ್, ಕುವೈತ್ ಇಂಡಿಗೋ ವಿಮಾನ ಸಂಪರ್ಕ ಸೇವೆ ಒದಗಿಸಿದೆ.

ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ :

ಹುಬ್ಬಳ್ಳಿ ವಿಮಾನನಿಲ್ದಾಣದಿಂದ ದೇಶ, ವಿದೇಶಕ್ಕೆ ಸಂಚರಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದರಿಂದಾಗಿ ನೂತನ ಟರ್ಮಿನಲ್ ಸದಾ ಜನಜಂಗುಳಿಯಿಂದ ತುಂಬಿರುತ್ತದೆ. ವಿದೇಶಕ್ಕೆಸಂಪರ್ಕ ಕಲ್ಪಿಸುವ ವಿಮಾನಗಳಿಗೂ ಭಾರಿ ಬೇಡಿಕೆ ಕಂಡು ಬರುತ್ತಿದ್ದು, ನೂರಾರು ಜನ ಈಗಾಗಲೇ ಹುಬ್ಬಳ್ಳಿಯಿಂದ ವಿದೇಶಕ್ಕೆ ಹಾರಲು ಟಿಕೆಟ್ ಮುಂಗಡವಾಗಿ ಕಾಯ್ದಿರಿಸಿಕೊಂಡಿದ್ದಾರೆ.