Home Local ಅಂಕೋಲದಲ್ಲಿ ಅದ್ದೂರಿಯಿಂದ ನಡೆದ ನಾಮಧಾರಿ ಸಮಾಜದ ದಹಿಂಕಾಲ ಉತ್ಸವ

ಅಂಕೋಲದಲ್ಲಿ ಅದ್ದೂರಿಯಿಂದ ನಡೆದ ನಾಮಧಾರಿ ಸಮಾಜದ ದಹಿಂಕಾಲ ಉತ್ಸವ

SHARE

ಅಂಕೋಲಾ : ತಾಲೂಕಿನಲ್ಲಿ ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಿಂದ ಜರುಗಿತು.

ವೆಂಕಟರಮಣ ದೇವಸ್ಥಾನದಿಂದ ವಿವಿಧ ರೂಪಕಗಳೊಂದಿಗೆ ಬೃಹತ್ ಮೆರವಣಿಗೆ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಸ್ತೋಮವನ್ನು ರಂಜಿಸಿತು.

ಶ್ರೀ ವೆಂಕಟರಮಣ ದೇವ ಶ್ರೀ ಶಾಂತಾದುರ್ಗಾ ದೇವಿ ರಥೋತ್ಸವದೊಂದಿಗೆ ಮಂಗಳೂರಿನ ಹೆಸರಾಂತ ಈಶ್ವರ ತಂಡದಿಂದ ಅಘೋರಿಗಳ ಅದೃಶ್ಯ ರೂಪಕ ಬ್ಲಾಕ್ ಬಾಕ್ಸರ್ ಮತ್ತು ರಾಕ್ ಜಿಂ ಸುರತ್ಕಲ್ ತಂಡದಿಂದ ಬಾಹುಬಲಿ ಸಿನಿಮಾದ ಕಾಲಕೇಯ ದೃಶ್ಯ ರೂಪಕ ಸಾಯಿ ಮಹಿಳಾ ಮತ್ತು ಪುರುಷರ ತಂಡ ಚೆಂಡೆ ವಾದನ ಬ್ರಹ್ಮಶ್ರೀ ನಾರಾಯಣ ಗುರುಗಳ ರಥ ಸ್ಥಳೀಯ ಕಲಾವಿದರು ಶ್ರೀಧರ್ ನಾಯ್ಕ ಸಂಗಡಿಗರು ಇವರಿಂದ ನರಸಿಂಹ ಅವತಾರ ದಯಾನಂದ ನಾಯಕ್ ಇವರ ಗಜ ಚರ್ಮಾಂಬರ ದೃಶ್ಯ ರೂಪಕ ಸೇರಿದಂತೆ ಹಲವಾರು ರೂಪಕಗಳು ಮೆರವಣಿಗೆಯುದ್ದಕ್ಕೂ ಮೆರಗು ನೀಡಿದವು.