Home Local ಶ್ರೀಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶ್ರೀಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

SHARE
OLYMPUS DIGITAL CAMERA

ಹೊನ್ನಾವರ: ಎಂ.ಪಿ.ಇ. ಸೊಸೈಟಿಯ, ಎಸ್. ಡಿ. ಎಂ. ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೊನ್ನಾವರದ ಶ್ರೀಭಗವದ್ಗೀತಾ ಅಭಿಯಾನ ಸಮಿತಿಯು ದಿನಾಂಕ 01-12-2018ರಂದು ಆಯೋಜಿಸಿದ ಹೊನ್ನಾವರ ತಾಲ್ಲೂಕಾ ಮಟ್ಟದ ಶ್ರೀಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ಮನುಶ್ರೀ ಮಂಜುನಾಥ ಹೆಗಡೆ ಪ್ರಥಮ ಸ್ಥಾನ, ಸ್ವಾತಿ ಮಂಜುನಾಥ ನಾಯ್ಕ ದ್ವಿತೀಯ ಸ್ಥಾನ ಹಾಗೂ ಜಯಲಕ್ಷ್ಮೀ ಗೌಡ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಘನ ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.