Home Important ‘ಸಮ್ಮಿಶ್ರ ಸರ್ಕಾರ ಬಂಡೆಯಂತೆ ಭದ್ರವಾಗಿದೆ’: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.

‘ಸಮ್ಮಿಶ್ರ ಸರ್ಕಾರ ಬಂಡೆಯಂತೆ ಭದ್ರವಾಗಿದೆ’: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.

SHARE

ಬೆಂಗಳೂರು:ವಿಧಾನಸೌಧದ ಮುಂಭಾಗದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಸುಮಾರು 167 ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ಟ್ಯಾಕ್ಸಿ ಹಾಗೂ ಸರಕು ಸಾಗಾಣಿಕೆ ವಾಹನಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,’ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಭದ್ರವಾಗಿದ್ದು , ಒಂದು ರೀತಿಯಾಗಿ ಬಂಡೆ ತರಹ ಭದ್ರವಾಗಿದೆ. ಯಾರು ಎಷ್ಟೇ ಸದ್ದು ಮಾಡಿದರೂ ಏನೂ ಪ್ರಯೋಜನವಾಗುವುದಿಲ್ಲ’ ಎಂದು ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ

ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಾವ್ಡೇಕರ್ ಹೇಳಿಕೆಗೆ ಉತ್ತರ ಕೊಡೋಕೆ ಆಗುತ್ತಾ? ಕಳೆದ ಆರು ತಿಂಗಳಿಂದಲೂ ಹೀಗೆ ಭೂಕಂಪ ಆಗುತ್ತದೆ ಎಂದು ಸೌಂಡ್ ಮಾಡುತ್ತಲೇ ಇದ್ದಾರೆ. ಅದರೆ ಇದೂವರೆಗೂ ಭೂಕಂಪದ ಎಫೆಕ್ಟ್ ಕಾಣಿಸಿಲ್ಲ. ನಮ್ಮ ಸರ್ಕಾರ ಭದ್ರವಾಗಿ ಬಂಡೆಯ ರೀತಿಯಲ್ಲಿದೆ. ಸರ್ಕಾರಕ್ಕೆ ಏನು ಮಾಡಲು ಸಾಧ್ಯವಿಲ್ಲವೆಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ ಎಂದು ವರದಿಯಾಗಿದೆ.
.