Home Local ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಮಟಾವತಿಯಿಂದ ಮಿಷನ್ ಸಾಹಸಿ ಕರಾಟೆ ಪ್ರದರ್ಶನ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಮಟಾವತಿಯಿಂದ ಮಿಷನ್ ಸಾಹಸಿ ಕರಾಟೆ ಪ್ರದರ್ಶನ.

SHARE

ಕುಮಟಾ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಮಟಾವತಿಯಿಂದ
ಇಂದು ವಿದ್ಯಾರ್ಥಿಪರಿಷತ ಕುಮಟಾ ಘಟಕದಿಂದ ಮಿಷನ್ ಸಾಹಸಿ ಕರಾಟೆ ಪ್ರದರ್ಶನವನ್ನು ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮವನ್ನು ಪಿಎಸ್ಐ ಸುಧಾ ಟಿ.ಅಘನಾಶಿನಿ ಉದ್ಘಾಟಿಸಿದರು ಮತ್ತು ಅಧ್ಯಕ್ಷತೆಯನ್ನು ಎಚ್ ಬೆಣ್ಣೆ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಯುತ ಸತೀಶ್ ಬಿ ನಾಯ್ಕ್ ವಹಿಸಿಕೊಂಡಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಲತಾ ಎನ್ ನಾಯ್ಕ್ ಮುಖ್ಯ ಅತಿಥಿಗಳಾಗಿ ಶ್ರೀ ಶಿಹಾನ್ ಎಸ್ ಪಿ ಹಂದೆ ಕರಾಟೆ ಶಿಕ್ಷಕರು ಆಗಮಿಸಿದ್ದರು. 800ಕ್ಕೂ ಅಧಿಕಸಂಖ್ಯೆಯಲ್ಲಿವಿದ್ಯಾರ್ಥಿಗಳು ಆಗಮಿಸಿದ್ದರು.ವಿದ್ಯಾರ್ಥಿ ಪರಿಷತನ ಶಿರಸಿ ವಿಭಾಗ ಸಹ ಸಂಚಾಲಕ್ ಕಾರ್ತಿಕ್ ನಾಯ್ಕ ಮತ್ತು ಕಾರವಾರಜಿಲ್ಲಾ ಸಹ ಸಂಚಾಲಕ್ ಸಂದೇಶ್ ನಾಯ್ಕ
ಕುಮಟಾ ನಗರ ಕಾರ್ಯದರ್ಶಿ ಯೋಗೇಶ್ ನಾಯ್ಕ, ನಗರ ವಿದ್ಯಾರ್ಥಿನಿ ಪ್ರಮುಕಿ ಅನಿತಾ ನಾಯ್ಕ, ಮತ್ತು ಸಕ್ರಿಯ ಕಾರ್ಯಕರ್ತರಾದ ಅಕ್ಷಯ್ ನಾಯಕ್,ಮಣಿಕಂಠ ನಾಯ್ಕ್,ಗಣೇಶ್ ನಾಯ್ಕ್ ಇತರೆ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .