Home Local ಶ್ಯಾಮ ಶಾಸ್ತ್ರಿ ಅಸಹಜ ಸಾವು ಪ್ರಕರಣ: ಶ್ರೀಗಳ ವಿಚಾರಣೆಯನ್ನು ನಡೆಸದಂತೆ ಹೈಕೋರ್ಟ ಸೂಚನೆ.

ಶ್ಯಾಮ ಶಾಸ್ತ್ರಿ ಅಸಹಜ ಸಾವು ಪ್ರಕರಣ: ಶ್ರೀಗಳ ವಿಚಾರಣೆಯನ್ನು ನಡೆಸದಂತೆ ಹೈಕೋರ್ಟ ಸೂಚನೆ.

SHARE

ಬೆಂಗಳೂರು : ಶ್ಯಾಮ ಶಾಸ್ತ್ರಿ ಅಸಹಜ ಸಾವು ಪ್ರಕರಣ ಸಂಬಂಧಿಸಿದಂತೆ ,ಪ್ರಕರಣದಲ್ಲಿ ಶ್ರೀಗಳ ಪಾತ್ರವಿಲ್ಲ, ಹೀಗಿರುವಾಗ ವಿಚಾರಣೆ ಸಲ್ಲ, ಎಂದು ಹೈಕೋರ್ಟಿಗೆ ಶ್ರೀಗಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ ಪುರಸ್ಕರಿಸಿದ್ದು ಶ್ರೀಗಳ ವಿಚಾರಣೆಯನ್ನು ನಡೆಸದಂತೆ ಪುತ್ತೂರಿನ ನ್ಯಾಯಾಲಯದಲ್ಲಿರುವ ಪ್ರಕರಣಕ್ಕೆ ತಡೆ ನೀಡಿದೆ. ಇದರಿಂದ ಶ್ರೀ ಶ್ರೀ ರಾಘವೇಶ್ವರಭಾರತೀ ಶ್ರೀಗಳಿಗೆ ನಿರಾಳವಾಗಿದೆ.

ಶ್ಯಾಮ ಶಾಸ್ತ್ರಿ ಅಸಹಜ ಸಾವು ಪ್ರಕರಣ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸಿ.ಐ.ಡಿ. ಪುತ್ತೂರಿನ ನ್ಯಾಯಾಲಯಕ್ಕೆ ರಾಘವೇಶ್ವರ ಶ್ರೀ, ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಶಿವಶಂಕರ ಬೋನಂತ್ತಾಯ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದು, ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯ ಶ್ರೀಗಳಿಗೆ ಸಮನ್ಸ್ , ಇನ್ನುಳಿದ ಆರೋಪಿಗಳ ವಿರುದ್ಧ ವಾರಂಟ್ ಜಾರಿ ಮಾಡಿತ್ತು.

ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಶಿವಶಂಕರ್ ಬೋನಂತ್ತಾಯ ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿದ್ದು, ನಾಳೆ ಪುತ್ತೂರಿನ ಕೋರ್ಟಿನಲ್ಲಿ ಜಾಮೀನಿನ ವಿಚಾರಣೆ ನಡೆಯಲಿದೆ, ಅಲ್ಲದೇ ಶ್ರೀಗಳೂ ಪುತ್ತೂರಿನ ಕೋರ್ಟಿಗೆ ಹಾಜರಾಗಬೇಕಾಗಿತ್ತು, ಆದರೆ, ಈಗ ಹೈ ಕೋರ್ಟು ಶ್ರೀಗಳಿಗೆ ಕೊಂಚ ನಿರಾಳವೆಸುವಂತೆ ಆದೇಶ ಹೊರಡಿಸಿದೆ.

ಪ್ರಕರಣದಲ್ಲಿ ಶ್ರೀಗಳ ಪಾತ್ರವಿಲ್ಲ, ಹೀಗಿರುವಾಗ ವಿಚಾರಣೆ ಸಲ್ಲ, ಎಂದು ಹೈಕೋರ್ಟಿಗೆ ಶ್ರೀಗಳು ರಿಟ್ ಅರ್ಜಿ ಹಾಕಿದ್ದರು, ಅರ್ಜಿಯನ್ನು ವಿಚಾರಣೆ ನಡೆಸಿ ನ್ಯಾಯಾಲಯವು ಶ್ರೀಗಳ ವಿಚಾರಣೆಯನ್ನು ನಡೆಸದಂತೆ ಪುತ್ತೂರಿನ ನ್ಯಾಯಾಲಯದಲ್ಲಿರುವ ಪ್ರಕರಣಕ್ಕೆ ತಡೆ ನೀಡಿದೆ.

ಶ್ರೀಗಳ ಪರ ಹಿರಿಯ ನ್ಯಾಯವಾದಿ ಸೀ.ವಿ. ನಾಗೇಶ್ ವಾದಿಸಿದರು, ನ್ಯಾಯವಾದಿ ಅರುಣ್ ಶ್ಯಾಮ್ ಮತ್ತು ಮುರಳಿ ಮೋಹನ್ ಗೋವಿಂದ ರಾಜ್ ಇತರರು ವಕಾಲತ್ತು ವಹಿಸಿದ್ದರು.