Home Important ಗಗನಕ್ಕೇರಿದ ಟೊಮ್ಯಾಟೊ ಬೆಲೆ : ಕೆಜಿಗೆ 70 ರಿಂದ 80 ರೂ.

ಗಗನಕ್ಕೇರಿದ ಟೊಮ್ಯಾಟೊ ಬೆಲೆ : ಕೆಜಿಗೆ 70 ರಿಂದ 80 ರೂ.

SHARE

ಬೆಂಗಳೂರು : ಕೆಲವು ದಿನಗಳ ಹಿಂದಷ್ಟೇ ಟೊಮ್ಯಾಟೊ ಬೆಲೆ 20 ರೂ ಇತ್ತು. ಇದೀಗ ದಿಢೀರನೆ ಕೆಜಿಗೆ 70 ರಿಂದ 80 ರೂ.ಗೆ ಏರಿಕೆಯಾಗಿದೆ.

ಕಳೆದ ಜೂನ್​ ತಿಂಗಳಲ್ಲಿ ಟೊಮ್ಯಾಟೊ ಬೆಲೆ ಕೆ.ಜಿಗೆ 15 ರಿಂದ 20ರೂ ಇತ್ತು. ಆ ನಂತರದ ದಿನಗಳಲ್ಲಿ ಬೆಲೆಯಲ್ಲಿ ಇನ್ನಷ್ಟು ಕುಸಿತ ಕಂಡು ಕೆ.ಜಿ ಗೆ 8 ರಿಂದ 10 ರೂ ಬೆಲೆಯನ್ನು ಹೊಂದಿತ್ತು. ಇದರಿಂದಾಗಿ ಟೊಮ್ಯಾಟೊ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಡಿಸೆಂಬರ್​ ತಿಂಗಳಿನಲ್ಲಿ ಚೇತರಿಕೆ ಕಂಡ ಟೊಮ್ಯಾಟೊ ಬೆಲೆಯು ಕೆ.ಜಿ ಗೆ 17 ರಿಂದ 20 ರೂ ಗೆ ಏರಿಕೆಯಾಗಿ 24 ರೂಗೆ ಮಾರಾಟವಾಗುತ್ತಿತ್ತು.

ಇದಕ್ಕೆ ಕಾರಣ ತೀವ್ರವಾದ ಚಳಿಯಿಂದ ಟೊಮ್ಯಾಟೊ ಬೆಲೆಯು ಏಕಾಏಕಿ ಏರಿಕೆಯಾಗಿದೆ. ಗ್ರಾಹಕರಿಗೆ ಕಡಿಮೆ ದರದಲ್ಲಿ ದೊರಕುತ್ತಿದ್ದ ಟೊಮ್ಯಾಟೊ ಚಳಿಗೆ ಕಾಯಿ ಕಟ್ಟದೆ ಇಳುವರಿ ಕುಸಿತಗೊಂಡಿರುವುದೇ ಬೆಲೆ ಏರಿಕೆಗೆ ಮೂಲ ಕಾರಣವಾಗಿದೆ. ಶೇ.40ರಷ್ಟು ಇಳುವರಿ ಶೇ. 40ರಷ್ಟು ಕುಂಠಿತವಾಗಿದೆ ಎನ್ನಲಾಗಿದೆ.

ಚಳಿಯ ತೀವ್ರತೆ ಹೆಚ್ಚಾಗಿದ್ದು, ಶೀತಕ್ಕೆ  ಟೊಮ್ಯಾಟೊ ಹಣ್ಣಾಗುತ್ತಿಲ್ಲ.ಇದರಿಂದಾಗಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಪೂರೈಕೆಯು ಅರ್ಧದಷ್ಟು ಇಳಿಕೆಯಾಗಿದ್ದು, ಬೆಲೆಯಲ್ಲಿ ದಿಢೀರನೇ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಈ ದರ  ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ .

ರಾಜ್ಯದಲ್ಲಿ ಟೊಮ್ಯಾಟೊ ಇಳುವರಿ ಕುಂಠಿತಗೊಂಡಿರುವುದರಿಂದ ಬೇರೆ ರಾಜ್ಯದಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ.