Home Local ಮಗಳನ್ನೇ ಕೊಂದ ತಂದೆ..? ಉತ್ತರ ಕನ್ನಡಿಗರೇ ಬೆಚ್ಚಿ ಬೀಳುವ ಸುದ್ದಿ..!

ಮಗಳನ್ನೇ ಕೊಂದ ತಂದೆ..? ಉತ್ತರ ಕನ್ನಡಿಗರೇ ಬೆಚ್ಚಿ ಬೀಳುವ ಸುದ್ದಿ..!

SHARE

ಯಲ್ಲಾಪುರ: ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗುವ ಸುದ್ದಿಗಳೇ ನಮಗೆ ನೋವು ಉಂಟುಮಾಡುತ್ತಿತ್ತು, ಆದರೆ ಸಾಲದ ಬಾಧೆಯಿಂದ ಮಗಳನ್ನು ಕೊಲೆಗೈದಿದ್ದಾನೆ ಈತ. ಇದೀಗ ಈ ಸುದ್ದಿ ಉತ್ತರ ಕನ್ನಡಿಗರನ್ನೇ ಬೆಚ್ಚಿ ಬೀಳಿಸಿದೆ ಎಂದರೂ ತಪ್ಪಲ್ಲ.

 ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಮಗಳನ್ನು ತಂದೆಯೇ ಹತ್ಯೆಗೈದ ಅಮಾನವೀಯ ಘಟನೆ ಯಲ್ಲಾಪುರ ಕುಂಬ್ರಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ನಯನಾಳ ಚಿಕಿತ್ಸೆಗಾಗಿ ಆಕೆಯ ತಂದೆ ನಾಗರಾಜ್ ಪೂಜಾರ್ ಸಾಕಷ್ಟು ವೆಚ್ಚ ಮಾಡಿದ್ದ. ದಾನಿಗಳು ನೀಡಿದ ಹಣದ ಜತೆಗೆ ಸಾಲ ಮಾಡಿ ಚಿಕಿತ್ಸೆ ಕೊಡಿಸಿದ್ದ. ಆದರೆ ಮಗಳಿಗೆ ವೆಚ್ಚ ಮಾಡಿದ್ದ ಸಾಲದ ಹೊರೆಯನ್ನು ತಲೆಗೆ ಹಚ್ಚಿಕೊಂಡಿದ್ದ ಆತ, ಪತ್ನಿಗೆ ಹಿಂಸೆ ನೀಡುತ್ತಿದ್ದನಂತೆ. ಇದರಿಂದ ಪತ್ನಿಯು ಮಕ್ಕಳು ಹಾಗೂ ಗಂಡನನ್ನು ಬಿಟ್ಟು ನಾಲ್ಕು ತಿಂಗಳ ಹಿಂದೆ ಮನೆ ತೊರೆದಿದ್ದಳು.

ಆದರೆ ಕೆಲವು ತಿಂಗಳ ಹಿಂದೆ ಕಾರವಾರದ ಮಹಿಳಾ ಸಂಘಟನೆ ಪತಿ, ಪತ್ನಿ ಹಾಗೂ ಮಕ್ಕಳೊಂದಿಗೆ ಕೌನ್ಸಿಲಿಂಗ್ ಮಾಡಿದ್ದರು. ಈ ವೇಳೆ ಮಕ್ಕಳು ತಾಯಿ ಬೇಕೆಂದು ತಿಳಿಸಿದ್ದು ಮಕ್ಕಳ ಹೇಳಿಕೆಯಿಂದ ಸಿಟ್ಟಾಗಿದ್ದ ಎನ್ನಲಾಗಿದೆ.

ನಾಗರಾಜ ಜ.5ರಂದು ರಾತ್ರಿ ಇಬ್ಬರು ಮಕ್ಕಳಾದ ನಯನಾ ಹಾಗೂ ಸಹನಾಳಿಗೆ ಹೊಡೆದು ಗಾಯಗೊಳಿಸಿದ್ದ. ಪುನಃ ಬುಧವಾರ ಕೂಡ ನಯನಾಳಿಗೆ ಸಿಟ್ಟಿನಿಂದ ಹೊಡೆದು ಕೊಲೆ ಮಾಡಿರುವುದಾಗಿ ವರದಿಯಾಗಿದ್ದು ,ಈ ಕುರಿತಾಗಿ ದೂರು ದಾಖಲಾಗಿದೆ ಎನ್ನಲಾಗಿದೆ. ಈ ಅಮಾನುಷ ಘಟನೆ ಮಾತ್ರ ಉತ್ತರ ಕನ್ನಡಿಗರನ್ನು ಬೆಚ್ಚಿ ಬೀಳಿಸಿದೆ. ಘಟನೆಯ ತನಿಖೆಯ ನಂತರ ಸೂಕ್ತ ಮಾಹಿತಿಗಳು ಹೊರಬರಬೇಕಿದೆ.