Home Important 2019ರ ಜಾಗತಿಕ ಪಾರಂಪರಿಕ ಪಟ್ಟಿಯಲ್ಲಿ ಹಂಪಿಗೆ ಎರಡನೇ ಸ್ಥಾನ.

2019ರ ಜಾಗತಿಕ ಪಾರಂಪರಿಕ ಪಟ್ಟಿಯಲ್ಲಿ ಹಂಪಿಗೆ ಎರಡನೇ ಸ್ಥಾನ.

SHARE

ಬಳ್ಳಾರಿ: ಯುನೆಸ್ಕೋದ ಜಾಗತಿಕ ಪಾರಂಪರಿಕ ಪಟ್ಟಿಯಲ್ಲಿರುವ 2019ರಲ್ಲಿ ನೀವು ನೋಡಲೇಬೇಕಾದ ಜಾಗತಿಕ ಪ್ರವಾಸಿ ತಾಣಗಳಲ್ಲಿ ರಾಜ್ಯದ ಐತಿಹಾಸಿಕ, ವಿಶ್ವಪರಂಪರೆ ತಾಣ ಹಂಪಿ ಎರಡನೇ ಸ್ಥಾನ ಪಡೆದಿದೆ. “ದಿ ನ್ಯೂಯಾರ್ಕ್ ಟೈಮ್ಸ್ಪತ್ರಿಕೆ ಬಿಡುಗಡೆ ಮಾಡಿರುವ 2019ರಲ್ಲಿ ನೋಡಬೇಕಾದ  ಟಾಪ್ 52  ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹಂಪಿಗೆ 2ನೇ ಸ್ಥಾನ ಸಿಕ್ಕಿದೆ ಎಂದು ತಿಳಿದುಬಂದಿದೆ.

ಇನ್ನು ಹಂಪಿ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಪ್ರವಾಸಿ ಸ್ಥಳ ಎನ್ನುವುದು ಗಮನಾರ್ಹ ಅಂಶ. ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ ವಿಶ್ವವಿಖ್ಯಾತ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು.

ವಿಜಯನಗರದ ವೈಭವಕ್ಕೆ ಸಾಕ್ಷಿಯಾಗಿದ್ದ ನಗರಿ ಹಲವಾರು ದೇವಾಲಯ, ವಿಶಾಲವಾದ ಮಾರುಕಟ್ಟೆ ಬೀದಿಗಳನ್ನು ಹೊಂದಿದೆ. ಇಲ್ಲಿ ನೂರಕ್ಕೂ ಅಧಿಕ ಮಂಟಪಗಳು, ದೇವಾಲಯಗಳಿದ್ದು ಇತಿಹಾಸ ಪ್ರೇಮಿಗಳು, ಪ್ರವಾಸಿಗರ ಮನಸೂರೆಗೊಳ್ಳೂತ್ತದೆ.

16 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವಾಗಿದ್ದ ಹಂಪಿ ತನ್ನ ಶಿಲ್ಪಕಲೆಯ ಮೂಲಕ ಮೈನ್​ ಟೂರಿಸ್ಟ್​ ಸ್ಪಾಟ್​ ಆಗಿತ್ತು. ಹಾಗಾಗಿ ಹಂಪಿ ಎರಡನೇ ಸ್ಥಾನವನ್ನ ಪಡೆದಿದೆ ಎಂದು ವರದಿಯಾಗಿದೆ.