Home Local ಮೆಮೊರಿ ಟ್ರೈನರ್ ಮಾರುತಿ ಅಂಬಿಗಗೆ 2019 ರ ಮಕರ ಜ್ಯೋತಿ ಪ್ರಶಸ್ತಿ ಪ್ರದಾನ

ಮೆಮೊರಿ ಟ್ರೈನರ್ ಮಾರುತಿ ಅಂಬಿಗಗೆ 2019 ರ ಮಕರ ಜ್ಯೋತಿ ಪ್ರಶಸ್ತಿ ಪ್ರದಾನ

SHARE


ಕುಮಟಾ: ತಾಲೂಕಿನ ಗುಡೇ ಅಂಗಡಿ ಪ್ರತಿ ವರ್ಷ  ವಿವಿಧ  ಕ್ಷೇತ್ರಗಳಲ್ಲಿ ಅದ್ವಿತೀಯ  ಸಾಧನೆ ಮಾಡಿದ ನಾಲ್ವರಿಗೆ  ಪ್ರಶಸ್ತಿ ನೀಡಿ  ಗೌರವಿಸುತ್ತದೆ. ಈ  ಬಾರಿ  ಕುಮಟಾದ ಮೈಂಡ್ and ಮೆಮೊರಿ ಟ್ರೈನರ್
ಮಾರುತಿ ಅಂಬಿಗ ಮಿರ್ಜಾನ್  ಇವರಿಗೆ 2019ರ ಮಕರ ಜ್ಯೋತಿ   ಪ್ರಶಸ್ತಿ ನೀಡಿ  ಗೌರವಿಸಿದೆ..

ಮಾರುತಿ ಅಂಬಿಗ ಅದ್ಭುತ ಸ್ಮರಣ ಶಕ್ತಿ ಯನ್ನ ಹೊಂದಿದ್ದು 24 ಗಂಟೆ ಗಳಲ್ಲಿ  500 ಪುಟದ  ಪುಸ್ತಕವನ್ನ ಓದಿ  ಪೇಜ್ ಬೈ ಪೇಜ್  ನೆನಪಿಡಬಲ್ಲರು. ಇವರ  ಅದ್ಭುತ ಸ್ಮರಣ ಶಕ್ತಿ ಯನ್ನು  ಕಂಡು   ಕುಮಟಾದ  ಶ್ರೀ  ಅಯ್ಯಪ್ಪ  ಭಕ್ತವ್ರoದ (ರಿ) ಗುಡೆಅಂಗಡಿ ( ಮಾದರಿ ರಸ್ತೆ ) ಮಕರ ಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಿದೇ.

ವೇದಿಕೆಯಲ್ಲಿ ಭಕ್ತವ್ರಂದದ ಗೌರವಾಧ್ಯಕ್ಷ ಆರ್.ಜಿ.ನಾಯ್ಕ ಬಾಡ
ವೃಂದದ ಮುಖ್ಯಸ್ಥರಾದ
ಶ್ರೀ ಲಕ್ಷ್ಮಣ ಗುರುಸ್ವಾಮಿ – ಗುಡೇಅಂಗಡಿ,
ಸಾಮಾಜಿಕ ಕಾರ್ಯಕರ್ತ ರಾಧಾಕೃಷ್ಣ ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದು 18ವರ್ಷದ ಯಾತ್ರೆಮಾಡುವ ಮಾಲಾಧಾರಿಗಳನ್ನು ಮತ್ತು ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಮಾತನಾಡಿದರು.
ದಿನೇಶ್ ನಾಯ್ಕ ಕಾನ್ಸುರ -ಶಿರಸಿ
ವೃಂದದ ಸ್ವಯಂ ಸೇವಾ ಸದಸ್ಯ ರಾಘವೇಂದ್ರ ನಾಯ್ಕ ವಂದಿಸಿದರು.