Home Local ಹಿರೇಗುತ್ತಿ ಹೈಸ್ಕೂಲ್‍ನಲ್ಲಿ ಯಶಸ್ವಿಗೊಂಡ ಕುಮಟಾ ತಾಲೂಕ ಹಿಂದಿ ಕಾರ್ಯಗಾರ

ಹಿರೇಗುತ್ತಿ ಹೈಸ್ಕೂಲ್‍ನಲ್ಲಿ ಯಶಸ್ವಿಗೊಂಡ ಕುಮಟಾ ತಾಲೂಕ ಹಿಂದಿ ಕಾರ್ಯಗಾರ

SHARE

ಕುಮಟಾ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಹಾಗೂ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಕುಮಟಾ ಪ್ರೌಢಶಾಲೆಗಳ ಹಿಂದಿ ಭಾಷಾ ಶಿಕ್ಷಕರ ಕಾರ್ಯಗಾರವನ್ನು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್‍ನಲ್ಲಿ ಆಯೋಜಿಸಲಾಗಿತ್ತು.


ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಹಿಂದಿ ಭಾಷಾ ಸಂಘದ ಅಧ್ಯಕ್ಷರಾದ ಶಿವಾ.ಸಿ.ನಾಯ್ಕರವರು. “ಹಿಂದಿ ಭಾಷೆಯ ಬೆಳವಣ ಗೆ ಹಾಗೂ ಮಕ್ಕಳಲ್ಲಿ ಹಿಂದಿ ಕಲಿಕೆಗೆ ಉತ್ತೇಜನ ನೀಡುವ ದೆಸೆಯಲ್ಲಿ ಶಿಕ್ಷಕರು ಕ್ರೀಯಾಶೀಲರಾಗಿ ಮುನ್ನಡೆಯಬೇಕು ಎಂದು” ಕರೆ ನೀಡಿದರು.


ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ ಅಧ್ಯಕ್ಷೀಯ ನುಡಿಗಳನ್ನಾಡಿದ ಸೆಕೆಂಡರಿ ಹೈಸ್ಕೂಲ್ ಮುಖ್ಯಾಧ್ಯಾಪಕರಾದ ಶ್ರೀ ರೋಹಿದಾಸ. ಎಸ್. ಗಾಂವಕರರವರು “ಕೇವಲ ಬೋಧನೆ ಮಾಡುವವನು ಉತ್ತಮ ಶಿಕ್ಷಕನಾಗಲಾರ. ಮಗುವಿನ ಮನಸ್ಸನ್ನು ಅರಿತು ಮಗುವಿನಲ್ಲಿ ಕಲಿಕೆಯನ್ನು ಪ್ರಚೋದಿಸುವವನು ಸಮರ್ಥ ಶಿಕ್ಷಕನಾಗಬಲ್ಲ. ಶಿಕ್ಷಕ ಭೋಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು” ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕುಮಟಾ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಶ್ರೀ ಉಮೇಶ ಭಟ್ಟರವರು “ಹಿಂದಿ ಭಾಷೆಯ ಶಿಕ್ಷಕರು ಹೆಚ್ಚು ಸೃಜನಶೀಲರಾಗಿದ್ದಾರೆ ಹೆಚ್ಚೆಚ್ಚು ಶೈಕ್ಷಣ ಕ ಕಾರ್ಯಾಗಾರಗಳನ್ನು ನಡೆಸುವುದರ ಜೊತೆಗೆ ಉತ್ತಮ ಫಲಿತಾಂಶ ಬರಲು ಕಾರಣಭೂತರಾಗಿದ್ದಾರೆ” ಎಂದರು.
ಹಿರೇಗುತ್ತಿ ಹೈಸ್ಕೂಲ್ ಅಧ್ಯಾಪಕ ಸಾಂಸ್ಕøತಿಕ ಸಂಘದ ಅಧ್ಯಕ್ಷರಾದ ಎನ್.ರಾಮು. ಹಿರೇಗುತ್ತಿರವರು “ಗುಣಾತ್ಮಕ ಶಿಕ್ಷಕ ನೀಡಬೇಕಾದರೆ ಇಂತಹ ವಿಷಯ ಕಾರ್ಯಗಾರ ಶಿಕ್ಷಕರಿಗೆ ಅತ್ಯಗತ್ಯ” ಎಂದರು.


ಶ್ರೀ ವಿಜಯಕುಮಾರ ಜಿ. ತಳವಾರ ಅನಿಸಿಕೆ ವ್ಯಕ್ತಪಡಿಸಿ ಹಿರೇಗುತ್ತಿ ಹೈಸ್ಕೂಲ್ ಶಾಲೆಯ ವಾತಾವರಣ ಮತ್ತು ವಿದ್ಯಾರ್ಥಿಗು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಶೈಕ್ಷಣ ಕ ಸಾಧನೆಗಳನ್ನು ಶ್ಲಾಘಿಸಿ ಕಾರ್ಯ ಸಂಘಟಕರಿಗೆ ಕುಮಟಾ ಹಿಂದಿ ಶಿಕ್ಷಕರ ಸಂಘದವರ ಪರವಾಗಿ ಅಭಿನಂದಿಸಿದರು .


ಕಾರ್ಯಕ್ರಮದ ವೇದಿಕೆಯಲ್ಲಿ ಕುಮಟಾ ಹಿಂದಿ ಸಂಘದ ಖಜಾಂಚಿ ಶ್ರೀ ವಸಂತ ಶೇಟ್, ಎಮ್.ಎಸ್.ಪಟಗಾರ ಉಪಸ್ಥಿತರಿದ್ದರು.
ಈ ಕಾರ್ಯಗಾರದಲ್ಲಿ ವಿಶೇಷವಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಮಾಡಬಹುದಾದ ಅನೇಕ ಕ್ರಿಯಾ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.


ಹೈಸ್ಕೂಲ್ ವಿದ್ಯಾರ್ಥಿನಿಯಾದ ನಾಗಶ್ರೀ ಪಟಗಾರ. ಸಂಗಡಿಗರ. ಪ್ರಾರ್ಥನೆ ಮತ್ತು ವಿನಯ ಗೌಡ ಸಂಗಡಿಗರ ಸ್ವಾಗತಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಹಿರೇಗುತ್ತಿ ಹೈಸ್ಕೂಲ್ ಹಿಂದಿ ಶಿಕ್ಷಕಿ ಇಂದಿರಾ ಬಿ. ನಾಯಕ ಸರ್ವರನ್ನು ಸ್ವಾಗತಿಸಿದರು. ಸರ್ಕಾರಿ ಪ್ರೌಢಶಾಲೆ ಅಘನಾಶಿನಿ ಅಧ್ಯಾಪಕಿ ಶ್ರೀಮತಿ ರೇಣುಕಾ ಬಾಳೆಹೊಸುರರವರು ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರೂಪಿಸಿದರು. ಶ್ರೀ ಮಹಾದೇವ ಎಸ್. ಪಟಗಾರ ಸಂತೆಗುಳಿ ವಂದಿಸಿದರು. ಹಿರೇಗುತ್ತಿ ಹೈಸ್ಕೂಲ್ ಶಿಕ್ಷಕ ವೃಂದದವರ ಸಹಕಾರದೊಂದಿಗೆ ಹಿಂದಿ ಕಾರ್ಯಗಾರ ಯಶ್ವಸಿಯಾಗಿ ಸಂಪನ್ನಗೊಂಡಿತು.

              ವರದಿ: ಎನ್.ರಾಮು ಹಿರೇಗುತ್ತಿ