Home Local ಹೆಸ್ಕಾಂ ನಿರ್ಲಕ್ಷ್ಯದಿಂದ ಜಾನುವಾರು ಸಾವು

ಹೆಸ್ಕಾಂ ನಿರ್ಲಕ್ಷ್ಯದಿಂದ ಜಾನುವಾರು ಸಾವು

SHARE

ಕುಮಟ: ಪಟ್ಟಣದ ಹೆಡ್ ಪೋಸ್ಟ್ ಕಿಮಾನಿಕರ್ ಮಿಲ್ ಪಕ್ಕದಲ್ಲಿ ಅವೈಜ್ಜಾನಿಕವಾಗಿ ಹೆಸ್ಕಾಂ ಅಳವಡಿಸಲಾಗಿರುವ ಹಾಕಲಾಗಿರುವ ವಿದ್ಯುತ್ ಟ್ರಾನ್ ಪರ್ಮನಲ್ಲಿ ವಿದ್ಯುತ್ ನಿಂದಾಗಿ ಇಂದು ಬೆಳಿಗ್ಗೆ ಒಂದು ಜಾನುವಾರು ಅಸುನಿಗಿದೆ.

ಹೆಸ್ಕಾಂ ಇಲಾಖೆ ಬೇಜಾವ್ದಾರಿಯಿಂದ ವಿದ್ಯುತ್ ಟ್ರಾನ್ಸ್ ಫಾರ್ಮ್ ಅಳವಡಿಸಿರುವುದುದೇ ಇದಕ್ಕೆ ಕಾರಣವಾಗಿದೆ. ಮುಖಪ್ರಾಣಿ ಸಾವನ್ನಪ್ಪಿದ ಬಳಿಕ ಹೆಸ್ಕಾಂ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ಜನ ಓಡಾಡುತ್ತೀರುತ್ತಾರೆ. ಒಂದು ವೇಳೆ ಯಾರಾದರು ಸಾವನ್ನಪ್ಪಿದ್ದರೆ ಇದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಹೆಸ್ಕಾಂ ಇಲಾಖೆ ಇನ್ನೂ ದೊಡ್ಡ ಅನಾಹುತ ನಡೆಯುವ ಮೊದಲು ಕ್ರಮಕ್ಕೆ ಮುಂದಾಗಬೇಕಿದೆ. ಇಲ್ಲವಾದಲ್ಲಿ ಸಾರ್ವಜನಿಕರು ಬಿದಿಗೆ ಇಳಿದು ಹೋರಾಟ ನಡೆಸಲು ಮುಂದಾಗಿರುವುದಾಗಿ ಎಚ್ಚರಿಸಿದ್ದಾರೆ.