Home Economy ಕುಮಟಾ ಉದಯ ಬಜಾರ್ ನಲ್ಲಿ ಲಕ್ಕಿ ಡ್ರಾ ವಿಜೇತರಿಗೆ ಸಿಕ್ಕಿತು ಸ್ಕೂಟಿ.! ನಾಳೆಯವರೆಗೆ “ಉದಯ ಉತ್ಸವ”

ಕುಮಟಾ ಉದಯ ಬಜಾರ್ ನಲ್ಲಿ ಲಕ್ಕಿ ಡ್ರಾ ವಿಜೇತರಿಗೆ ಸಿಕ್ಕಿತು ಸ್ಕೂಟಿ.! ನಾಳೆಯವರೆಗೆ “ಉದಯ ಉತ್ಸವ”

SHARE

ಕುಮಟಾ: ಉದಯ ಸಮೂಹ ಸಂಸ್ಥೆಯ Festival Dhamaka Offer ನ ನಿಮಿತ್ತ ಗ್ರಾಹಕರು 499ರೂ ಗಿಂತ ಅಧಿಕ ಮೊತ್ತದ ವಸ್ತುಗಳ ಖರೀದಿಗೆ ಕೂಪನ್ ನೀಡಲಾಗಿದ್ದು ಲಕ್ಕಿ ಡ್ರಾ ಮೂಲಕ ಇಂದು  ಬಹುಮಾನ ಘೋಷಣೆ ಮಾಡಲಾಗಿದೆ.ಲಕ್ಕಿ ಡ್ರಾ ಮೂಲಕ ಆಯ್ಕೆಯಾದ No : 933  ನ ಕುಮಟಾದ ಕಾಮಾಕ್ಷಿ ಶೇಟ್ ರವರಿಗೆ ಅದ್ರಷ್ಟ ಖುಲಾಯಿಸಿದ್ದು ಇವರಿಗೆ  ಸ್ಕೂಟಿ ಪೆಪ್ ಬಹುಮಾನವಾಗಿ ಬಂದಿದೆ. ಕುಮಟಾದ ಉದಯ ಬಜಾರ್ ನಲ್ಲಿ ಉದಯ ಸಮೂಹ ಸಂಸ್ಥೆಯ ಮಾಲಿಕರಾದ ಶ್ರೀ ರಮೇಶ ಎ. ಬಂಗೇರ ಲಕ್ಕಿ ಡ್ರಾ ವಿಜೇತರ ಲಾಟರಿ ಎತ್ತಿ ಹೆಸರನ್ನು ಘೋಷಿಸಿದರು. ವ್ಯವಸ್ಥಾಪಕ ಪ್ರಾನ್ಸಿಸ್ ಎ. ಡಿಸೋಜಾ ಹಾಗೂ ಕುಮಟಾ ಉದಯ ಬಜಾರ್ ನ ಎಲ್ಲ ಸಿಬ್ಬಂದಿಗಳು ಹಾಗೂ ಅನೇಕ ಗ್ರಾಹಕರು ಹಾಜರಿದ್ದರು.

  ಮುಂದುವರಿದ ಉದಯ ಉತ್ಸವ

ಉದಯ ಉತ್ಸವದ ಮೂಲಕ ಜನವರಿ 23 ರಿಂದ ವೈವಿದ್ಯಮಯ ಕೊಡುಗೆಗಳು ಹಾಗೂ ಕಾಂಬೀ ಆಫರ್ ಮತ್ತು ಬಹುಮಾನಗಳನ್ನು ನೀಡುವ ಮೂಲಕ ಕುಮಟಾದ ಉದಯ ಬಜಾರ್ ಗ್ರಾಹಕರ ಮನ‌ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸಂಸ್ಥಾಪನಾ ದಿನದ ಅಂಗವಾಗಿ ಉದಯ ಉತ್ಸವದಲ್ಲಿ ಲಕ್ಕಿ ಡ್ರಾ ಮೂಲಕ ಬಹುಮಾನವನ್ನೂ ನೀಡಲಾಗಿದೆ.

    ಉದಯ ಉತ್ಸವದ ಈ  ನಾಲ್ಕು ದಿನಗಳು ಗ್ರಾಹಕರಿಂದ ಅತ್ಯುತ್ತಮ  ಪ್ರತಿಕ್ರಿಯೆ ಬಂದಿದೆ ಇನ್ನೆರಡು ದಿನಗಳ ಕಾಲ ಈ ಉತ್ಸವ ನಡೆಯುತ್ತಿದ್ದು ಇದರ ಸದುಪಯೋಗ ಪಡೆಯುವಂತೆ ಉದಯ ಬಜಾರ್ ಕುಮಟಾದ ವ್ಯವಸ್ಥಾಪಕರು ಸತ್ವಾಧಾರ ನ್ಯೂಸ್ ಮೂಲಕ ವಿನಂತಿ ಮಾಡಿದ್ದಾರೆ.

    ಜನವರಿ 27 ರವರೆಗೆ ನಡೆಯುವ ಈ ಉದಯ ಉತ್ಸವದಲ್ಲಿ ಹೈಯಸ್ಟ್ ಡಿಸ್ಕೌಂಟ್ , ಹಳೇಯ ವಸ್ತುಗಳ ಎಕ್ಸಚೇಂಜ್ ಆಫರ್ ಹಾಗೂ ಕೊಂಬಿ ಆಫರ್ ಗಳು ಗ್ರಾಹಕರಿಗೆ ಸಿಗಲಿದೆ.