Home Important ಮೀನುಗಾಗರೇ ಹುಷಾರ್!! ಇನ್ನು ನೈಟ್ ಫಿಶಿಂಗ್ ಮಾಡಲೇ ಬಾರದು.!!

ಮೀನುಗಾಗರೇ ಹುಷಾರ್!! ಇನ್ನು ನೈಟ್ ಫಿಶಿಂಗ್ ಮಾಡಲೇ ಬಾರದು.!!

SHARE

ಕಾರವಾರ: ಲೈಲ್ಯಾಂಡ್ ಬೋಟ್ ಮತ್ತು ಪರ್ಸಿನ್ ಬೋಟ್ ಫಿಶಿಂಗ್ ಮಾಡುವವರ ನಡುವೆ ‌ವಿವಾದ ಮತ್ತು ಪೈಪೋಟಿ ಇತ್ತು.ಆದರೆ ಮಲ್ಪೆಯಲ್ಲಿ‌ ಮೀನುಗಾರರ ಮಧ್ಯೆ ಬಿರುಕು ಮೂಡಿಸಿದ್ದ ನೈಟ್ ಫಿಶಿಂಗ್ ವಿವಾದಕ್ಕೆ ಕೊನೆಗೂ‌ ತೆರೆ ಬಿದ್ದಿದೆ.

ನೈಟ್ ಫೀಶಿಂಗ್‌ ಮೀನುಗಾರಿಕೆಗೆ ದೇಶದದ್ಯಾಂತ ನಿಷೇಧವಿದ್ದರೂ‌ ಮಲ್ಪೆಯ ಮೀನುಗಾರರು ನೈಟ್ ಫಿಶಿಂಗ್ ಮೀನುಗಾರಿಕೆ ನಡೆಸುತ್ತಿದ್ದರು. 
ಇದರಿಂದಾಗಿ ಮಲ್ಪೆ ಮೀನುಗಾರರು ಅಕ್ರೋಶ ವ್ಯಕ್ತಪಡಿಸಿದ್ದರು.ನೈಟ್ ಫಿಶಿಂಗ್ ನಡೆಸುವರ ವಿರುದ್ದ ಮೀನುಗಾರರು ಮಲ್ಪೆಯಲ್ಲಿ‌ ಭಾರೀ ಪ್ರತಿಭಟನೆಯನ್ನ ನಡೆಸಿದ್ದರು.

ಅದ್ರೂ ಕೆಲವೊಂದು‌ ಮೀನುಗಾರರು ನೈಟ್ ಫಿಶಿಂಗನ್ನು ಮುಂದುವರೆಸಿದ್ದರು.ಹೀಗಾಗಿ ಮಲ್ಪೆಯ ಮೀನುಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದೀಗ ಹೈಕೋರ್ಟ್ ೨೦೧೭ ರ ಅದೇಶವನ್ನು ಎತ್ತಿ ಹಿಡಿದಿದ್ದು ನೈಟ್ ಫಿಶಿಂಗ್ ಮೀನುಗಾರಿಕೆಯನ್ನ ಸಂಪೂರ್ಣ ನಿಷೇಧಿಸಿ ಅದೇಶ ಹೊರಡಿಸಿದೆ.

ಮೀನುಗಾರರ ಮೇಲೆ ಕೆಲವೊಂದು ಆರೋಪಗಳಿವೆ.ಮೀನುಗಳು ಮೊಟ್ಟೆ ಇಡುವ ಸಮಯದಲ್ಲಿ ಮೀನುಗಾರಿಕೆ ನಡೆಸುತ್ತಾರೆ,ಆದ್ದರಿಂದಲೇ ಮೀನುಗಳ ಸಂತತಿ ನಾಶ ಆಗುತ್ತಿದೆ ಎನ್ನುತ್ತಾರೆ ಕೆಲವರು.ಮೀನುಗಳನ್ನು ಹಿಡಿಯಲು ಪೈಪೋಟಿಗಳಿರುವುದರಿಂದ ಸಮುದ್ರದಲ್ಲಿ ಕೆಲವು ಕಸರತ್ತುಗಳನ್ನು ನಡೆಸಿ‌ ಮೀನುಗಾರಿಕೆ ನಡೆಸುತ್ತಾರೆ.ಆದರೆ ಮೀನುಗಾರರು ಮೀನುಗಾರಿಕೆ ನಡೆಸುವಾಗ ಕೆಲವು ಬೋಟಿಗೆ ಕ್ಯಾಮರಾ ಹಾಕಿ ಮೀನು ಹಿಡಿಯುತ್ತಾರೆ.ಇದರಿಂದ ಮೊಟ್ಟೆ ಇಡುವ,ಮತ್ತು ಮರಿ ಮೀನುಗಳನ್ನು ಹಿಡಿಯುತ್ತಾರೆ.ಆದ್ದರಿಂದ ಮೀನುಗಳ ಸಂತಾನ ಬೇಗ ನಾಶವಾಗುತ್ತದೆ.ಇವರ ಪೈಪೋಟಿಗಳಿಂದಲೇ ಸಮುದ್ರದಲ್ಲಿ ಜಗಳಕ್ಕೆ ಕಾರಣವಾಗಿತ್ತದೆ.ಇನ್ನಾದರೂ ಮೀನುಗಾರರು ತಾಳ್ಮೆಯಿಂದ ಮೀನುಗಾರಿಕೆ ನಡೆಸಿದರೆ ಎಲ್ಲರಿಗೂ ಒಳ್ಳೆಯದು.