Home Important ಕರ್ನಾಟಕ ಬಜೆಟ್ 2019: ಬಜೆಟ್ ಮಂಡಿಸಿದ ಸಿ.ಎಂ ಕುಮಾರಸ್ವಾಮಿ.

ಕರ್ನಾಟಕ ಬಜೆಟ್ 2019: ಬಜೆಟ್ ಮಂಡಿಸಿದ ಸಿ.ಎಂ ಕುಮಾರಸ್ವಾಮಿ.

SHARE

 

  ಇಂದು ಸಿಎಂ ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದ ಎರಡನೇ ಬಜೆಟ್​ ಮಂಡನೆಯನ್ನು ಮಾಡಿದ್ಧಾರೆ. ಸತತ 3 ಗಂಟೆಗಳ ಕಾಲ ಸುದೀರ್ಘ ಬಜೆಟ್​ ಪ್ರತಿಯನ್ನು ಓದಿದ್ಧಾರೆ.

  

2019-20ನೇ ಸಾಲಿನ  ಸುಮಾರು ₹2 ಲಕ್ಷದ 36 ಸಾವಿರ ಕೋಟಿ ರೂಪಾಯಿಯ ಭಾರೀ ಪ್ರಮಾಣದ ಬಜೆಟ್​ ಮಂಡನೆ ಮಾಡಿದರು. ವಿವಿಧ ಕ್ಷೇತ್ರಗಳ ಅಭಿವೃದ್ದಿ ಸೇರಿದಂತೆ, ರೈತರ ಪರವಾಗಿ ಒಂದಷ್ಟು ಯೋಜನೆಗಳನ್ನು ಘೋಷಿಸಿದ್ದಾರೆ ಎಂದು ವರದಿಯಾಗಿದೆ.

ಬಜೆಟ್​ನ ಹೈಲೈಟ್ಸ್​ ಇಲ್ಲಿವೆ.

  • ಪ್ರತಿ ಲೀಟರ್​ ಹಾಲಿಕೆ ನೀಡುತ್ತಿರುವ 5 ರೂ. ಪ್ರೋತ್ಸಾಹ ಧನ 6 ರೂಪಾಯಿಗೆ ಏರಿಕೆ.
  • ಬಿಯರ್, ಡ್ರಾಟ್ ಬಿಯರ್, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಲೋ ಆಲ್ಕೊಹಾಲಿಕ್ ಬಿವೆರೇಜಸ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳ.
  • ಮಲೆನಾಡು, ಕರಾವಳಿಯಲ್ಲಿ ಭತ್ತದ ಉತ್ಪಾದನೆ ಹೆಚ್ಚಿಸಲು ಕರಾವಳಿ ಪ್ಯಾಕೇಜ್​​​  ಹೆಕ್ಟೇರ್​​ಗೆ 7 ಸಾವಿರ ಪ್ರೋತ್ಸಾಹ ಧನ,  5 ಕೋಟಿ ಅನುದಾನ
  • ಸಿರಿಧಾನ್ಯ ಬೆಳೆಗಾರರಿಗೆ ರೈತ ಸಿರಿ ಎಂಬ ಹೊಸ ಯೋಜನೆ, 10 ಕೋಟಿ ಅನುದಾನ
  • ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಜನ್ಮಸ್ಥಳವಾದ ರಾಮನಗರದ ಬಾಣಂದೂರು ಗ್ರಾಮ ಅಭಿವೃದ್ಧಿಗೆ 25 ಕೋಟಿ.
  • ಡಾ. ಶಿವಕುಮಾರ ಸ್ವಾಮೀಜಿ ಹುಟ್ಟೂರು ವೀರಾಪುರವನ್ನು ಮಾದರಿ ಗ್ರಾಮವಾಗಿ ಅಭಿವೃದ್ಧಿಪಡಿಸಲು 25 ಕೋಟಿ.
  • ಮಾನಸ ಸರೋವರ ಯಾತ್ರಿಗಳ ಪ್ರೋತ್ಸಾಹ ಧನ ₹30 ಸಾವಿರಕ್ಕೆ ಏರಿಕೆ.
  • ರಾಮನಗರದ ಹಾರೋಹಳ್ಳಿ, ಚಿಕ್ಕಬಳ್ಳಾಪುರದ ಚೇಳೂರು,  ಬಾಗಲಕೋಟೆಯ ತೇರದಾಳ, ಚಿಕ್ಕಮಗಳೂರು ಜಿಲ್ಲೆಯ ಕಳಸ ಹೊಸ ತಾಲೂಕುಗಳಾಗಿ ಘೋಷಣೆ.
  • ಸಿಲ್ಕ್​​ ಬೋರ್ಡ್​ನಿಂದ ಕೆ.ಆರ್​​ ಪುರಂಗೆ ಹೊರ ವರ್ತುಲ ರಸ್ತೆ 16579 ಕೋಟಿ ಮೀಸಲು
  • ಯಶವಂತರಪುರ ರೈಲ್ವೆ- ಮೆಟ್ರೋ ನಿಲ್ದಾಣಗಳ ನಡುವೆ ಪಾದಚಾರಿ ಸೇತುವೆ
  • ಮೆಟ್ರೋ ಹಾಗೂ ಬಸ್​ಗಳಲ್ಲಿ ಬಳಸಬಹುದಾದ ಕಾರ್ಡ್​ಗಳ ಆರಂಭ. 10 ಮೆಟ್ರೋ ನಿಲ್ದಾಣಗಳಲ್ಲಿ ದ್ವಿಚಕ್ರವಾಹನಗಳಿಗೆ ಚಾರ್ಜಿಂಗ್ ಮಾಡುವ ವ್ಯವಸ್ಥೆ.
  • ಗೊರಗುಂಟೆಪಾಳ್ಯದಲ್ಲಿ ಅಂಡರ್​ಪಾಸ್​ ನಿರ್ಮಾಣ.
  • ಪೆಟ್ರೋಲ್ ಆಟೋಗಳನ್ನು ಎಲೆಕ್ಟ್ರಿಕ್​​​ ಆಟೋಗಳಾಗಿ ಪರಿವರ್ತಿಸಲು ಸಹಾಯಧನ.
  • ಮೇಲುಕೋಟೆ ಅಭಿವೃದ್ಧಿಗೆ 5 ಕೋಟಿ ಮೀಸಲು
  • ಬೆಂಗಳೂರು ಆಟೋ ಟ್ಯಾಕ್ಸಿ ಚಾಲಕರಿಗೆ ಬಾಡಿಗೆ ಆಧಾರದ ಮೇಲೆ ವಸತಿ ಕಲ್ಪಿಸಲು ಸಾರಥಿ ಸೂರು ಯೋಜನೆ, 50 ಕೋಟಿ ಮೀಸಲು.
  • ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ 5 ಮೊರಾರ್ಜಿ ದೇಸಾಯಿ ಮುಸ್ಲಿಂ ಹೆಣ್ಣುಮಕ್ಕಳ ವಸತಿ ಶಾಲೆ.
  • ಮಾತೃಶ್ರೀ ಯೋಜನೆಯಡಿ ಸಹಾಯಧನ 2 ಸಾವಿರಕ್ಕೆ ಹೆಚ್ಚಳ.
  • ಅಂಗನವಾಡಿ ಕಾರ್ಯಕರ್ತೆಯರ ಗೌರವಧನ  500ಕ್ಕೆ ಹೆಚ್ಚಳ, ಸಹಾಯಕಿಯರ ಗೌರವಧನ 250ಕ್ಕೆ ಹೆಚ್ಚಳ. 2019ರ ನವೆಂಬರ್​ 1ರಿಂದ ಜಾರಿಗೆ.
  • 60 ಕೋಟಿ ವೆಚ್ಚದಲ್ಲಿ ತುಮಕೂರಿನಲ್ಲಿ ಕ್ಯಾನ್ಸರ್​ ಆಸ್ಪತ್ರೆ ಸ್ಥಾಪನೆ.
  • ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂ ಸ್ಥಾಪನೆ 20 ಕೋಟಿ ಮೀಸಲು.
  • ಅಗ್ನಿಶಾಮಕ ಇಲಾಖೆಯಿಂದ ಗಗನಚುಂಬಿ ಕಟ್ಟಡಗಳ ಬೆಂಕಿ ಅವಘಡ ತಡೆಯಲು 90 ಮೀಟರ್ ಎತ್ತರ ತಲುಪಬಲ್ಲ ಏರಿಯಲ್ ಲ್ಯಾಡರ್ ಪ್ಲಾಟ್‍ಫಾರ್ಮ್ ವಾಹನ ಖರೀದಿ.
  • ಬೀದರ್ ಮತ್ತು ವಿಜಯಪುರಗಳಲ್ಲಿ ತಲಾ 1000 ಬಂಧಿಗಳ ಸಾಮರ್ಥ್ಯವುಳ್ಳ ಪ್ರತ್ಯೇಕ ವಿಶಿಷ್ಟ ಕೇಂದ್ರ ಕಾರಾಗೃಹ ಹಾಗೂ ಅರಸೀಕೆರೆಯಲ್ಲಿ 200 ಬಂಧಿ ಸಾಮರ್ಥ್ಯವುಳ್ಳ ಉಪಕಾರಾಗೃಹ ನಿರ್ಮಾಣ. ಈ ಆಯವ್ಯಯದಲ್ಲಿ 30 ಕೋಟಿ ರೂ. ಅನುದಾನ.
  • ಅಪರಾಧ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಆಡಿ  Drone Surveillance System ಜಾರಿ
  • ಪೊಲೀಸ್ ಕಾಲೋನಿಗಳಲ್ಲಿ ಮೂಲಸೌಲಭ್ಯ ಒದಗಿಸಲು 20 ಕೋಟಿ ರೂ. ಅನುದಾನ
  • ಬೆಂಗಳೂರು ನಗರದಲ್ಲಿ 8 ಹೊಸ ಸೈಬರ್ ಎಕಾನಾಮಿಕ್ ನಾರ್ಕೋಟಿಕ್ ವಿಂಗ್ ಪ್ರಾರಂಭಿಸಲು 4 ಕೋಟಿ ರೂ. ಅನುದಾನ. 
  • ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ದತ್ತಿ ಹಾಗೂ ಹಿರಿಯ ಪತ್ರಕರ್ತರ ಕ್ಷೇಮನಿಧಿ ದತ್ತಿಗಳಿಗೆ ತಲಾ 2 ಕೋಟಿ ರೂ. ಹೆಚ್ಚುವರಿ ಅನುದಾನ.
  • ತುಳು, ಕೊಡವ ಮತ್ತು ಕೊಂಕಣಿ ಭಾಷಾ ಚಲನಚಿತ್ರಗಳನ್ನ ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮ; 1 ಕೋಟಿ ರೂ. ಅನುದಾನ.
  • ಗಾಂಧೀಜಿ 150ನೇ ಜನ್ಮದಿನ ಆಚರಣೆಗೆ 5 ಕೋಟಿ ರೂ. ವಿಶೇಷ ಅನುದಾನ
  • ಪಣಂಬೂರು ಮತ್ತು ಸಸಿಹಿತ್ಲುವಿನಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ  7 ಕೋಟಿ ರೂ. ಅನುದಾನ
  • ಹಂಪಿಯಲ್ಲಿ ‘ಹಂಪಿ ವ್ಯಾಖ್ಯಾನ ಕೇಂದ್ರ’ ಹಾಗೂ ವಿಜಯಪುರದಲ್ಲಿ ‘ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರ’ವನ್ನು ಸ್ಥಾಪಿಸಲು ತಲಾ 1 ಕೋಟಿ ರೂ. ಅನುದಾನ
  • ಪ್ರವಾಸಿಗರನ್ನು ಆಕರ್ಷಿಸಲು ‘ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ’ ಆಯೋಜನೆಗೆ ₹2 ಕೋಟಿ ಅನುದಾನ.
  • ವಿಶ್ವ ವಿಖ್ಯಾತ ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಕೆಎಸ್‍ಟಿಡಿಸಿ ವತಿಯಿಂದ ಲಂಡನ್ ಬಿಗ್ ಬಸ್ ಮಾದರಿಯ 06 ಡಬಲ್ ಡೆಕ್ಕರ್ ತೆರೆದ ಬಸ್ ಸೇವೆ ಪ್ರಾರಂಭ; 5 ಕೋಟಿ ರೂ. ಅನುದಾನ.
  • ಬಾದಾಮಿಯನ್ನು ವಿಶ್ವವಿಖ್ಯಾತ ಪ್ರವಾಸಿ ತಾಣವನ್ನಾಗಿ ಮತ್ತು ಕರಕುಶಲ ಮಾರುಕಟ್ಟೆಯನ್ನಾಗಿ ಅಭಿವೃದ್ಧಿ ಪಡಿಸಲು 25 ಕೋಟಿ ರೂ. ಅನುದಾನ.
  • ಸರ್ಕಾರದ ಯೋಜನೆಗಳ ಪ್ರಚಾರ ಕಾರ್ಯಗಳನ್ನು ಸಮರ್ಥವಾಗಿ ಕೈಗೊಳ್ಳಲು ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣ ಘಟಕವನ್ನು ಪಾರಂಭಿಸಲು ಕ್ರಮ,
  • ಒಳಾಡಳಿತ ಇಲಾಖೆಯ ಪೊಲೀಸ್ ಪೇದೆಗಳಿಗೆ ನೀಡಲಾಗುವ ಕಷ್ಟ ಪರಿಹಾರ ಭತ್ಯೆ 2,000 ರೂ.ಗಳಿಗೆ ಹೆಚ್ಚಳ; 103 ಕೋಟಿ ರೂ. ಅನುದಾನ.
  • ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ ದಾವಣಗೆರೆ, ಹೊಸಕೋಟೆ ಮತ್ತು ಮದ್ದೂರಿನಲ್ಲಿ ಸ್ವಯಂಚಾಲಿತ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರಗಳ ಸ್ಥಾಪನೆ
  • ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ 6,500 ಕೋಟಿ ರೂ. ಅನುದಾನ ವಾಣಿಜ್ಯ ಬ್ಯಾಂಕುಗಳಿಗೆ ಹಾಗೂ 6,150 ಕೋಟಿ ರೂ. ಸಹಕಾರಿ ಕ್ಷೇತ್ರಕ್ಕೆ ನಿಗದಿ. ಸಹಕಾರ ಬ್ಯಾಂಕ್‍ಗಳ ಸಾಲ ಮನ್ನಾ ಪ್ರಕ್ರಿಯೆ ಜೂನ್-2019 ರೊಳಗೆ ಪೂರ್ಣ; ವಾಣಿಜ್ಯ ಬ್ಯಾಂಕುಗಳ ಸಾಲ ಯೋಜನೆಯೂ 2019-20 ರಲ್ಲಿ ಪೂರ್ಣ
  • ಕಾಂಪೀಟ್​ ವಿತ್​ ಚೈನಾ ಯೋಜನೆಗೆ 100 ಕೋಟಿ.
  • 2019-20ರಲ್ಲಿ ಬೀದರ್ ನಾಗರಿಕ ವಿಮಾನ ನಿಲ್ದಾಣ ಕಾರ್ಯಾಚರಣೆ ಪ್ರಾರಂಭಿಸಲು ಕ್ರಮ.
  • ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ “ಶಾಲಾ ಸಂಪರ್ಕ ಸೇತು” ಯೋಜನೆಯಡಿ 1,317  ಕಿರು ಸೇತುವೆಗಳನ್ನು ಪೂರ್ಣಗೊಳಿಸಲು ಕ್ರಮ.
  • ರೈತರಿಗೆ ಗುಣಮಟ್ಟದ ವಿದ್ಯುಚ್ಛಕ್ತಿ ಒದಗಿಸಲು 40,000 ಹೊಸ ಟ್ರಾನ್ಸ್ಫಾರ್ಮರ್ ಅಳವಡಿಕೆ.
  • ರೈತರಿಗೆ ಉಚಿತವಾಗಿ ನೀಡಲಾಗುತ್ತಿದ್ದ ನೀರಾವರಿ ಪಂಪ್‍ಸೆಟ್, ಭಾಗ್ಯ ಜ್ಯೋತಿ,  ಕುಟೀರಜ್ಯೋತಿ, ಗ್ರಾಹಕರ ಸಹಾಯಧನ 11,250 ಕೋಟಿ ರೂ.ಗಳಿಗೆ ಹೆಚ್ಚಳ
  • ಮುಜರಾಯಿ ಇಲಾಖೆ ಜಮೀನು ಒತ್ತುವರಿ ತೆರವಿಗೆ ಸರ್ವೆ ಕಾರ್ಯ.
  • ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ.
  • ಕಲಬುರಗಿ, ವಿಜಯಪುರ, ದಕ್ಷಿಣ ಕನ್ನಡ, ಮೈಸೂರು, ಗದಗ, ದಾವಣಗೆರೆ, ಧಾರವಾಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಡ್ರೋನ್‍ಗಳ ಮೂಲಕ ರೀ-ಸರ್ವೆ ಕಾರ್ಯ
  • ಅರ್ಕಾವತಿ ದಕ್ಷಿಣ ಪಿನಾಕಿನಿ ನದಿಗಳಲ್ಲಿ ಮತ್ತೆ ನೀರು ಹರಿಸುವ ಯೋಜನೆ.  ನೀರು ಕೊಯ್ಲು ಮಾಡುವ ಕಾರ್ಯಕ್ರಮ.
  • ಬೆಂಗಳೂರಿನಲ್ಲಿ 5 ಲಕ್ಷ ಬೀದಿದೀಪಗಳಲ್ಲಿ ಎಲ್​ಇಡಿ ಬೀದಿದೀಪಗಳಾಗಿ ಪರಿವರ್ತನೆ. ಚರ್ಚ್​ ಸ್ಟ್ರೀಟ್​, ಕಮರ್ಷಿಯಲ್ ಸ್ಟ್ರೀಟ್​, ಬ್ರಿಗೇಡ್​ ರಸ್ತೆಯನ್ನ ಪಾದಚಾರಿ ರಸ್ತೆಯನ್ನಾಗಿ ಬದಲಾಯಿಸುವ ಉದ್ದೇಶ.
  • ಬಿಬಿಎಂಪಿ ಪ್ರದೇಶಗಳಲ್ಲಿ ನವ ಬೆಂಗಳೂರು ಕ್ರಿಯಾ ಯೋಜನೆ 2300 ಕೋಟಿ ಮೀಸಲು
  • ಬಿಎಂಟಿಸಿ ಬಸ್​ ಸಂಖ್ಯೆ ಹೆಚ್ಚಿಸಲು ಅನುದಾನ ಹೆಚ್ಚಳ. 50 ಕೋಟಿ ಅನುದಾನ
  • ಹೈ-ಕ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ 1500 ಕೋಟಿ.
  • ಅನ್ನಭಾಗ್ಯ ಯೋಜನೆಗೆ 3700 ಕೋಟಿ ಅನುದಾನ.
  • 13 ರಿಂದ 15 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ಮಿನಿ ಒಲಂಪಿಕ್ 2019 ಆಯೋಜನೆ
  • ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಮರುಚಾಲನೆ
  • ನಾಡಪ್ರಭು ಕೇಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ.
  • ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಚಾಲಕರ ದಿನಾಚರಣೆ. ಪ್ರತಿ ವರ್ಷ 10 ಚಾಲಕರಿಗೆ 25 ಸಾವಿರ ಪುರಸ್ಕಾರ
  • ಕ್ರೈಸ್ತ ಸಮುದಾಯ ಅಭಿವೃದ್ಧಗೆ 200 ಕೋಟಿ.
  • 20 ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ 60ಕ್ಕೆ ಹೆಚ್ಚಳ.
  • ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ.
  • ಬೆಂಗಳೂರು ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ 300 ಕೋಟಿ.
  • ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ಅನುದಾನ. ಕೋಲಾರದ ಮಾಲೂರಿನಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪ ಕೇಂದ್ರ ಸ್ಥಾಪನೆ.
  • ಎಸ್​​ಸಿ ಎಸ್​ಟಿ ಅಭಿವೃದ್ಧಿಗೆ 30,445 ಕೋಟಿ ಅನುದಾನ.
  • ನಗರಪ್ರದೇಶಗಳಲ್ಲಿ 100 ಹೊಸ ಅಂಗನವಾಡಿ ಕೇಂದ್ರಗಳ ಸ್ಥಾಪನೆ. 100 ಅಂಗನವಾಡಿ ಕಟ್ಟಡಗಳ ದುರಸ್ಥಿ ಕಾಮಗಾರಿ.
  • ಹಾಸನದಲ್ಲಿ ತಾಂತ್ರಿಕ ವಿವಿ ಸ್ಥಾಪನೆ.  
  • ಆಧಾರ್​ ಆಧರಿತ ಡಿಜಿಟಲ್​ ಅಂಕಪಟ್ಟಿ. ಆನ್​ಲೈನ್​ ಮೂಲಕ ಪದವಿ ಪ್ರಮಾಣಪತ್ರ.
  • 4 ವರ್ಷಗಳಲ್ಲಿ ಹೋಬಳಿ ಮಟ್ಟದಲ್ಲಿ 1 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ.
  • ಶಾಲೆಗಳ ಮೂಲಭೂತ ಸೌಕರ್ಯ ಆಧುನೀಕರಣ, 5 ಸಾವಿರ ಶಾಲಾ ಕೊಠಡಿಗಳ ಉನ್ನತೀಕರಣ, ಕಟ್ಟಡಗಳ ನಿರ್ವಹಣೆಗೆ ಎಸ್ಟೇಟ್​ ಅಧಿಕಾರಿ ನೇಮಕ . ಗುರುಚೇತನಾ ಕಾರ್ಯಕ್ರಮದಡಿ ಶಿಕ್ಷಕರಿಗೆ ಸಾಮರ್ಥ್ಯ ವರ್ಧನೆಗೆ 10 ದಿನಗಳ ತರಬೇತಿ.
  • ಲ್ಯಾಂಟೋನಾ, ಯುಪಟೋರಿಯಂ ಕಳೆ ತೆಗೆಯಲು 5 ಕೋಟಿ ಅನುದಾನ
  • ಮಾನವ ಆನೆ ಸಂಘರ್ಷ ನಿಯಂತ್ರಣ ಎಂಬ ಹೊಸ ಯೋಜನೆ
  • ಜಲಸಂಪನ್ಮೂಲ ಇಲಾಖೆಗೆ 17202 ಕೋಟಿ ಅನುದಾನ.
  • ಕಾಲುವೆಗಳ ಆಧುನೀಕರಣಕ್ಕೆ ₹860 ಕೋಟಿ.
  • 400 ಕೋಟಿ ವೆಚ್ಚದಲ್ಲಿ ಮಂಡ್ಯ ವಿಶ್ವೇಶ್ವರಯ್ಯ ನಾಲೆ ಅಭಿವೃದ್ಧಿ.
  • ಕೆರೆ ತುಂಬಿಸೋ ಯೋಜನೆಗೆ ₹1600 ಕೋಟಿ.
  • ಏತನೀರಾವರಿ ಯೋಜನೆ ₹1553 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ನಿರ್ಧಾರ
  • ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಬೆಲೆ ಕುಸಿದಾಗ, 8 ತಿಂಗಳು ಉಚಿತ ಸಂಗ್ರಹ ಸೌಲಭ್ಯ.
  • ಮೀನುಗಾರಿಗೆ ದೋಣಿಗಳಿಗೆ ಶೇ. 50 ರಷ್ಟು ಸಹಾಯಧನ.
  • ಗದಗದಲ್ಲಿ ಹೆಸರುಬೆಳೆ ಸಂಸ್ಕರಣಾ ಘಟಕ
  • ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ವಯಂಚಾಲಿತ ಹಾಲು ಶೇಖರಣಾ ಘಟಕ.
  • 6 ಪ್ರಮುಖ ಸಿರಿಧಾನ್ಯಗಳಿಗೆ ಬೆಂಬಲ ಬೆಲೆ. ಹಾಪ್​ಕಾಮ್ಸ್​ , ನಂದಿನಿ ಔಟ್ಲೆಟ್​​ನಲ್ಲಿ ಸಿರಿಧಾನ್ಯ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥ
  • ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 2500 ಕೋಟಿ
  • ಮಂಗನಕಾಯಿಲೆ ಲಸಿಕೆ ತಯಾರಿಕೆಗೆ ಬೆಂಬಲ. 5 ಕೋಟಿ ಅನುದಾನ
  • ರೋಗಗ್ರಸ್ಥ ಜಾನುವಾರುಗಳಿಗೆ ಚಿಕಿತ್ಸೆ ನೀಡಲು  ಪಶುಚಿಕಿತ್ಸಾ ವಾಹನಗಳ ವ್ಯವಸ್ಥೆ.
  • ಮಿಡಿಸೌತೆ ಬೆಳೆಗಾರರಿಗೆ 6 ಕೋಟಿ ಪ್ಯಾಕೇಜ್.
  • ರಾಮನಗರ , ಧಾರವಾಡದಲ್ಲಿ ಮಾವು ಉತ್ಪನ್ನಗಳ ಸಂಸ್ಕರಣಾ ಘಟಕ, ಕೋಲಾರದಲ್ಲಿ ಟೊಮೇಟೋ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆ,  20 ಕೋಟಿ ಅನುದಾನ.
  • ರಾಯಚೂರಿನ ಸಿಂಧನೂರಿನಲ್ಲಿ ಕೃಷಿ ಪ್ರಾತ್ಯಕ್ಷಿಕೆ ಕೇಂದ್ರ ಸ್ಥಾಪನೆ. 10 ಸಾವಿರ ಕೋಟಿ ಅನುದಾನ. ಮುಂದಿನ ದಿನಗಳಲ್ಲಿ ವಸತಿ, ಊಟದ ಸೌಕರ್ಯ
  • ಮುಖ್ಯಮಂತ್ರಿ ಸೂಕ್ಷ್ಮ ನೀರಾವರಿ ಯೋಜನೆಗೆ 368 ಕೋಟಿ ರೂ. ಅನುದಾನ
  • ನೀರಾವರಿ ಸೌಲಭ್ಯಕ್ಕೆ ₹1050 ಕೋಟಿ ಯೋಜನೆ.
  • ಬಡವರ ಬಂಧು ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ, 7.5 ಕೋಟಿ ಅನುದಾನ.