Home Important ಶ್ರೀಭಾರತೀ ವಿದ್ಯಾಲಯದ ವಾರ್ಷಿಕೋತ್ಸವ ಆರಂಭ: ಸಂಯೋಜನೆಗೊಂಡಿದೆ ವೈವಿದ್ಯಮಯ ಕಾರ್ಯಕ್ರಮ

ಶ್ರೀಭಾರತೀ ವಿದ್ಯಾಲಯದ ವಾರ್ಷಿಕೋತ್ಸವ ಆರಂಭ: ಸಂಯೋಜನೆಗೊಂಡಿದೆ ವೈವಿದ್ಯಮಯ ಕಾರ್ಯಕ್ರಮ

SHARE

ಬೆಂಗಳೂರು: ವಿಶಿಷ್ಟವಾದ ವಾರ್ಷಿಕೋತ್ಸವ  ಶ್ರೀಭಾರತಿ ವಿದ್ಯಾಲಯ ದಲ್ಲಿ. ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಅನನ್ಯ ಮಾರ್ಗದರ್ಶನದಲ್ಲಿ ಅನುಪಮವಾಗಿ ಸರ್ವಾಂಗದಲ್ಲೂ ಮುನ್ನಡೆಯುತ್ತಿರುವ ಶಾಲೆ ಬೆಂಗಳೂರು ಮಹಾನಗರದ ಹಂಪಿನಗರದಲ್ಲಿ ರಾರಾಜಿಸುತ್ತಿರುವ  ಶ್ರೀಭಾರತೀ ವಿದ್ಯಾಲಯ. ಪ್ರತಿವರ್ಷದಂತೆ ಎರಡು ದಿನಗಳ ವಾರ್ಷಿಕೋತ್ಸವ ಆರಂಭವಾಯಿತು. 


    ಔಪಚಾರಿಕ ಉದ್ಘಾಟನೆಯ ಸಭೆಯಲ್ಲಿ ಅಭ್ಯಾಗತರಾಗಿ ಆಗಮಿಸಿದ ಶಿಕ್ಷಣಜ್ಞರಾದ ಡಾ  .ವೂಡೆ ಪಿ ಕೃಷ್ಣ ಅವರು ಪರಮಪೂಜ್ಯರ ದಿವ್ಯ ಪರಿಕಲ್ಪನೆ ಯನ್ನು, ಶಾಲಾಡಳಿತದ ಪರಿಶ್ರಮವನ್ನೂ. ಶಿಕ್ಷಕರ ನಿಷ್ಠೆಯನ್ನೂ ಮಕ್ಕಳ ಪ್ರತಿಭಾಶಾಲಿತ್ವವನ್ನೂ ಪ್ರಶಂಸಿಸುತ್ತಾ ಪಾಲಕರಿಗೆ ಕಿವಿಮಾತನ್ನೂ ಹೇಳಿದರು.

ಶಾಲಾಪ್ರಶಾಸನ ಮಂಡಲಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಹೆಗಡೆಯವರು ಸಭ್ಯರನ್ನೂ ಸಭಾಪತಿಗಳನ್ನೂ ಸ್ವಾಗತಿಸಿ ಶಾಲಸಾಧನೆ ಮಾಲೆಯನ್ನು ಸಂಕ್ಷೇಪವಾಗಿ ಅರಳಿಸಿದರು. ಕಾರ್ಯದರ್ಶಿಗಳಾದ ಪ್ರಮೋದ ಪಂಡಿತ್ ಅವರು ಸಭಾವಂದನೆಯನ್ನು ಸಲ್ಲಿಸಿದರು. ಸಭೆಯು ಶ್ರೀಮಠದ ಪರಂಪರೆಯನ್ನು ಅನುಸರಿಸಿ ಗುರುವಂದನೆಯೊಂದಿಗೆ ಆರಂಭವಾಯಿತು. ಪುಟಾಣಿ ಮಕ್ಕಳು ಪ್ರಾರ್ಥನಾ ಸ್ತೋತ್ರವನ್ನು ಹಾಡಿದರು. ವೇದಿಕೆಯಲ್ಲಿ ಶ್ರೀಸಂಸ್ಥಾನದವರ ಸಾಲಂಕೃತ ಭಾವಚಿತ್ರದೊಂದಿಗೆ, ಶ್ರೀಮಠದ ಶೈಕ್ಷಣಿಕ ಮಾರ್ಗದರ್ಶಕಿ ಡಾ. ಶಾರದಾ ಜಯಗೋವಿಂದ ಅವರು ಶಾಲೆಯ ಪದನಿಮಿತ್ತ ಪ್ರಾಂಶುಪಾಲ ಶ್ರೀಮತಿ ಅನಂತಲಕ್ಷ್ಮೀ ಇದ್ದರು. 
ಪ್ರತಿವರ್ಷವೂ ಒಂದು ನಿರ್ದಿಷ್ಠ ಥೀಮ್ ಆಧರಿಸಿ ಮನರಂಜನಾ ಕಾರ್ಯಕ್ರಮಗಳನ್ನು ಸಂಯೋಜಿಸಿಲಾಗುತ್ತದೆ. ಅದರಂತೆ ಈ ವರ್ಷ ಭಾರತೀಯ ಹಬ್ಬಗಳು ಎಂಬ ಸೂತ್ರದಲ್ಲಿ ಚಿಣ್ಣರು ಬಣ್ಣಬಣ್ಣದ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಕೆಜಿ ತರಗತಿಗಳ ಮಕ್ಕಳು ಯುಗಾದಿಯ ಕುರಿತು ಲಘುನಾಟಕದೊಂದಿಗೆ ಬೇಂದ್ರೆಯವರ ಯುಗಾದಿಯ ಹಾಡಿಗೆ ಹೆಜ್ಜೆ ಹಾಕಿದರು. ಇನ್ನೊಂದು ಪುಟಾಣಿ ತಂಡವು ಕೃಷ್ಣಜನ್ಮಾಷ್ಟಮಿಯನ್ನು ಪ್ರತಿನಿಧಿಸುವ ನೃತ್ಯವನ್ನು ಪ್ರದರ್ಶಿಸಿದರು. ಶಾಲಾ ಆವರಣದಲ್ಲಿ ಹಬ್ಬಗಳ ಆಚರಣೆ ಮತ್ತು ಮಹತ್ವವನ್ನು ಸಾರುವ ಪ್ರಸ್ತುತಿಗಳು ಪ್ರದರ್ಶಿತವಾಗಿದ್ದವು.ಎಲ್ಲೆಡೆ ನಡೆಯುತ್ತಿರುವಂತೆ ವಾರ್ಷಿಕೋತ್ಸವ ವಿಜೃಂಭಿಸಲು  ಸಿನಿಮೀಯ ಹಾಡು ನೃತ್ಯಗಳೇ ಬೇಕಾಗಿಲ್ಲ ನಮ್ಮತನವನ್ನು ಉಳಿಸಿಕೊಂಡೇ ಸದಭಿರುಚಿಯ ಮನರಂಜನೆಯನ್ನು ನೀಡಬಹುದು ಎಂಬುದನ್ನು ಶ್ರೀಭಾರತೀ ವಿದ್ಯಾಲಯ ದೃಢಪಡಿಸಿತು.