Home Local ನಾಳೆ ಕುಮಟಾದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ: ನಮಸ್ಕಾರ ಸಮಾಜ ಸೇವಾ ಸಂಸ್ಥೆಯಿಂದ‌ ಸಂಯೋಜನೆ

ನಾಳೆ ಕುಮಟಾದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ: ನಮಸ್ಕಾರ ಸಮಾಜ ಸೇವಾ ಸಂಸ್ಥೆಯಿಂದ‌ ಸಂಯೋಜನೆ

SHARE

ಕುಮಟಾ : ನಮಸ್ಕಾರ ಸಮಾಜ ಸೇವಾ ಸಂಸ್ಥೆ (ರಿ)  ಕುಮಟಾ (ಉ.ಕ) ಹಾಗು ರೋಟರ‌್ಯಾಕ್ಟ ಕ್ಲಬ್ ಕುಮಟಾಇವರ ಸಹಯೋಗದೊಂದಿಗೆ ದಿನಾಂಕ 10-02-2019  ರವಿವಾರ ಬೆಳಿಗ್ಗೆ  9.00 ರಿಂದ ಮಧ್ಯಾಹ್ನ 02-00 ಘಂಟೆಯ ವರೆಗೆ
ಏ.ಜೆ. ಇನ್ ಸ್ಟಿಟ್ಯೂಟ್ ಆಪ್ ಮೆಡಿಕಲ್ ಸಾಯನ್ಸ್ & ಹಾಸ್ಟಿಟಲ್ ಕುಂಟಿಕನಾ ಮಂಗಳೂರು ಇವರ. ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗಿಬ್ ಪ್ರೈಮರಿ ಸ್ಕೂಲ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

   ಮಂಗಳೂರಿನ ಪ್ರಸಿದ್ಧ ಏ‌.ಜೆ. ಆಸ್ಪತ್ರೆಯ ನುರಿತ ತಜ್ಞ ವೈದ್ಯರಿಂದ ಮತ್ತು ಆಹ್ವಾನಿತ ವಿಶೇಷ ತಜ್ಞರುಗಳಿಂದ  ಶಿಬಿರವನ್ನು ಆಯೋಜಿಲಾಗಿದೆ  ಈ ವಿಶೇಷ ಆರೋಗ್ಯ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು  ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕಾಗಿ ನಮಸ್ಕಾರ ಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ಶಿಬಿರದ ನೇತ್ರತ್ವ ಹಾಗೂ ಮಾರ್ಗದರ್ಶಕ ಸೂರಜ್ ನಾಯ್ಕ ಸೋನಿಯವರು ವಿನಂತಿಸಿದ್ದಾರೆ.

ಆರೋಗ್ಯ ಇಲಾಖೆ. ತಾಲೂಕಾ ಆಸ್ಪತ್ರೆ. ಕೆನರಾ ಎಜ್ಯುಕೇಶನ್ ಸೊಸೈಟಿ. ಡಾ.ಎಂ.ಡಿ.ನಾಯ್ಕ ಮೆಮೋರಿಯಲ್ ಟ್ರಸ್ಟ್. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕುಮಟಾ ಘಟಕ. ಕುಮಟಾ ತಾಲೂಕು ಯುವ ಒಕ್ಕೂಟ .ಕುಮಟಾ ಕೆಮಿಸ್ಟ್ & ಡ್ರಗ್ಗಿಷ್ಟ್  ಅಸೋಸಿಯೇಷನ್. ಕುಮಟಾ ತಾಲೂಕಿನ ಎಲ್ಲಾ ಯುವಕ ಯುವತಿ ಸಂಘ ಕುಮಟಾ ತಾಲೂಕಿನ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಎ‌.ಬಿ.ವಿ.ಪಿ ಕುಮಟಾ ಹಾಗೂ ಡಾ.ಎ.ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯ ಎನ್.ಎಸ್.ಎಸ್ ಘಟಕದವರು ಈ ಕಾರ್ಯಕ್ಕೆ‌ ಸಹಕಾರ ನೀಡಲಿದ್ದಾರೆ.

   ಜನರಲ್ ಫಿಜಿಶಿಯಲ್ ,ಜನರಲ್ ಸರ್ಜರಿ
ನರರೋಗ, ಮೂತ್ರಾಂಗ ರೋಗ ತಜ್ಞರು, ಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು, ಕ್ಯಾನ್ಸರ್ ತಜ್ಞರು, ಮೂಳೆ ತಜ್ಞರು, ಡಯಾಬಿಟಿಸ್ ತಜ್ಞರು, ಈ ‌ಸಂದರ್ಭದಲ್ಲಿ ಲಭ್ಯವಿರುವರು.

ಈ ಶಿಬಿರದಲ್ಲಿ ಪ್ರಾಥಮಿಕ ತಪಾಸಣೆ ನಡೆಸಲಾಗುವುದು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದಲ್ಲಿ  ಮಂಗಳೂರಿನ ಏ.ಜೆ. ಮೆಡಿಕಲ್  ಕಾಲೇಜ್ ಆಸ್ಪತ್ರೆಯಲ್ಲಿ  ಈ ಕೆಲ ಸೌಲಭ್ಯಗಳನ್ನು ಒದಗಿಸಿಲಾಗುವುದು.