Home Economy “ಬೃಂದಾವನ ಸೂಪರ್ ಮಾರ್ಕೆಟ್” ಎರಡನೇ ಮಳಿಗೆ ಉದ್ಘಾಟನೆ: ಗ್ರಾಹಕರ ಮನ ಗೆಲ್ಲುತ್ತಿದೆ ರವಿ ಶೆಟ್ಟಿ ಕವಲಕ್ಕಿಯವರ...

“ಬೃಂದಾವನ ಸೂಪರ್ ಮಾರ್ಕೆಟ್” ಎರಡನೇ ಮಳಿಗೆ ಉದ್ಘಾಟನೆ: ಗ್ರಾಹಕರ ಮನ ಗೆಲ್ಲುತ್ತಿದೆ ರವಿ ಶೆಟ್ಟಿ ಕವಲಕ್ಕಿಯವರ ಮಾಲಿಕತ್ವದ ಮಳಿಗೆ

SHARE

ಹೊನ್ನಾವರ: ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅತ್ಯುತ್ತಮ‌ ಗುಣಮಟ್ಟ ಹಾಗೂ ಯೋಗ್ಯ ದರದಲ್ಲಿ ಎಲ್ಲಾ ವಿಧದ ವಸ್ತುಗಳನ್ನು ಗ್ರಾಹಕರಿಗೆ ನೀಡುತ್ತಿರುವ “ಬೃಂದಾವನ ಸೂಪರ್ ಮಾರ್ಕೆಟ್” ಹೊನ್ನಾವರದ ೨ ನೇ ಮಳಿಗೆಯ ಉದ್ಘಾಟನೆ ಇಂದು ನಡೆಯಿತು. ಹೊನ್ನಾವರದ ಕಾಮತ್ ಹೊಟೆಲ್ ಪಕ್ಕ ಮಹಾಲೆ ಕಾಂಪ್ಲೆಕ್ಸ್ ನಲ್ಲಿ ಈ ಮಳಿಗೆ ಗ್ರಾಹಕರಿಗಾಗಿ ಇಂದು ತೆರೆಯಲ್ಪಟ್ಟಿದೆ.

ಅತ್ಯುತ್ತಮ ರೀತಿಯ ಸಂಯೋಜನೆಯಲ್ಲಿ ಹಾಗೂ ವಿಶಾಲವಾದ ವ್ಯವಸ್ಥಿತ ಪ್ರದೇಶದಲ್ಲಿ ಗ್ರಾಹಕರಿಗೆ ವಸ್ತುಗಳು ಕೈಗೆಟಕುವಂತೆ “ಬೃಂದಾವನ ಸೂಪರ್ ಮಾರ್ಕೆಟ್”ನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಗೃಹೋಪಯೋಗಿ ವಸ್ತುಗಳು, ನಿತ್ಯ ಬಳಕೆಯ ಪರಿಕರಗಳು ಹಣ್ಣು,ತರಕಾರಿ, ಸಾಂಬಾರು ಪದಾರ್ಥಗಳು,ಕಾಯಿ ಪಲ್ಲೆಗಳು ಹಾಗೂ ವಿವಿಧ ಕಂಪನಿಗಳ ಬ್ರಾಂಡೆಡ್ ವಸ್ತುಗಳು ಒಂದೇ ಸೂರಿನಡಿ ಲಭ್ಯವಿದೆ.

“ಬೃಂದಾವನ ಸೂಪರ್ ಮಾರ್ಕೆಟ್”ನ ಮಾಲಿಕರಾದ ಶ್ರೀ ರವಿ ಶೆಟ್ಟಿ ಕವಲಕ್ಕಿಯವರ ಸುಪುತ್ರಿ ಇಂದು ಈ ಸೂಪರ್ ಮಾರ್ಕೆಟ್ ನ ಎರಡನೇ ಮಳಿಗೆಗೆ ಶುಭ ಹಾರೈಸಿ ಮಳಿಗೆಯ ಉದ್ಘಾಟನೆ ಮಾಡಿದ್ದಾರೆ.

“ಬೃಂದಾವನ ಸೂಪರ್ ಮಾರ್ಕೆಟ್”ನ ಮಾಲಿಕರಾದ ಶ್ರೀ ರವಿ ಶೆಟ್ಟಿ ಕವಲಕ್ಕಿಯವರು ಸಾರ್ವಜನಿಕರು ನಮ್ಮ ಸೂಪರ್ ಮಾರ್ಕೆಟ್ ಗೆ ಬಂದು ವಸ್ತುಗಳನ್ನು ಖರೀದಿಸಿ ಬೆಂಬಲಿಸುವಂತೆ ವಿನಂತಿಸಿದ್ದಾರೆ. ಸತ್ವಾಧಾರ ಬಳಗದವರು ಈ ಸಂದರ್ಭದಲ್ಲಿ ರವಿ ಶೆಟ್ಟಿ ಕವಲಕ್ಕಿಯವರಿಗೆ ಶುಭ ಹಾರೈಸಿದರು.