Home Local ಆತ್ಮಲಿಂಗ ಪೂಜೆ ನೆರವೇರಿಸಿದ ಬಸವರಾಜ ಸ್ವಾಮಿಗಳು

ಆತ್ಮಲಿಂಗ ಪೂಜೆ ನೆರವೇರಿಸಿದ ಬಸವರಾಜ ಸ್ವಾಮಿಗಳು

SHARE

ಪ ಪೂ ಶ್ರೀ ಶ್ರೀ ಬಸವರಾಜ ಸ್ವಾಮಿಗಳು , ಅಂಬಿಗರ ಚೌಡಯ್ಯನವರ ಮಠ, ಬೆಳಗಾವಿ   ಇವರು   ಶ್ರೀ ಕ್ಷೇತ್ರ ಗೋಕರ್ಣದ ಶ್ರೀ  ಮಹಾಬಲೇಶ್ವರ ದೇವಾಲಯದಲ್ಲಿ  ಜರುಗುತ್ತಿರುವ  “ಗೋಕರ್ಣ ಗೌರವ”  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಶ್ರೀ ಎ ಟಿ ನಾಯ್ಕ  ಇವರು  ದೇವಾಲಯದ  ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವಿಸಿದರು .  ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಹಾಗೂ  ಉಪಾಧಿವಂತ ಮಂಡಳದ  ಸದಸ್ಯರು ಉಪಸ್ಥಿತರಿದ್ದರು . ವೇ ವಿಶ್ವನಾಥ ಭಟ್ ಪೂಜೆ ಕೈಂಕರ್ಯ ನೆರವೇರಿಸಿದರು .