Home Local ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಬಿದ್ದು ಗಾವಡಿ ಸಾವು:

ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಬಿದ್ದು ಗಾವಡಿ ಸಾವು:

SHARE

ಶಿರಸಿ: ತಾಲೂಕಿನ ಕಾನಗೋಡನಲ್ಲಿ ಹೊಸದಾದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುವಾಗ ಹುಚ್ಚಪ್ಪ ಭರಮಪ್ಪ ದೇಗೆರಿ ಎಂಬ ಗಾವಡಿ ಓರ್ವ  ಕೆಳಗೆ ಬಿದ್ದು ಸಾವು ಕಂಡ ಘಟನೆ  ನಡೆದಿದೆ.

38 ವರ್ಷದ ಹುಚ್ಚಪ್ಪ ಭರಮಪ್ಪ ದೇಗೆರಿ ಎಂಬಾತನೆ ಸಾವು ಕಂಡವರಾಗಿದ್ದಾರೆ. ಈತ ಕಾನಗೋಡನಲ್ಲಿ ಹೊಸ ಮನೆ ಕಟ್ಟುತ್ತಿರುವಾಗ ಮನೆಯ ಮೇಲುಗಡೆಯಿಂದ ಬಿದ್ದು ಆಸ್ಪತ್ರೆಗೆ ಒಯ್ಯುವಾಗ ಸಾವು ಕಂಡಿದ್ದಾನೆ ಎನ್ನಲಾಗಿದೆ.

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿ.ಎಸ್.ಐ. ಶಿವಕುಮಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಯೆಗೊಂಡಿದ್ದಾರೆ.