Home Important 2019 ರ ಲೋಕಸಭಾ ಚುನಾವಣೆ ದಿನಾಂಕ ನಿಗದಿ: ಕರ್ನಾಟಕದಲ್ಲಿ ಯಾವಾಗ ಚುನಾವಣೆ ಗೊತ್ತಾ?

2019 ರ ಲೋಕಸಭಾ ಚುನಾವಣೆ ದಿನಾಂಕ ನಿಗದಿ: ಕರ್ನಾಟಕದಲ್ಲಿ ಯಾವಾಗ ಚುನಾವಣೆ ಗೊತ್ತಾ?

SHARE

ನವದೆಹಲಿ: 2019 ರ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ಮಾ.10 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ದಿನಾಂಕ ಘೋಷಿಸಿದ್ದು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. 

ದೆಹಲಿ ವಿಜ್ಞನ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, 2019 ಲೋಕಸಭಾ ಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ.  ದೇಶಾದ್ಯಂತ  ಒಟ್ಟಾರೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ.23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ. 

ಏ. ರಂದು 11 ಮೊದಲ ಹಂತದ ಮತದಾನ ನಡೆಯಲಿದೆ. ಏಪ್ರಿಲ್18 ರಂದು 2 ನೇ ಹಂತದ ಮತದಾನ, ಏ. 23 ರಂದು 3 ನೇ ಹಂತದ ಮತದಾನ,  ಏ.29 ರಂದು 4 ನೇ ಹಂತದ ಮತದಾನ,  ಮೇ.6 ರಂದು 5ನೇ ಹಂತ  ಮೇ.12 ರಂದು 6ನೇ ಹಂತ  ಮೇ.19 ರಂದು 7 ನೇ ಹಂತದ ಮತದಾನ ನಡೆಯಲಿದೆ.

ಕರ್ನಾಟಕದಲ್ಲಿ ಯಾವಾಗ?

ಕರ್ನಾಟಕದ ಒಟ್ಟು 28 ಕ್ಷೇತ್ರಗಳಲ್ಲಿ 2 ಹಂತದ ಚುನಾವಣೆ ನಡೆಯಲಿದ್ದು, ಏ.18 ಹಾಗೂ ಏ.23 ರಂದು 2 ಹಂತಗಳಲ್ಲಿ ತಲಾ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೇ.23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.