Home Important ಕರ್ನಾಟಕ ಪರೀಕ್ಷಾ ಪ್ರಾಧಿಕಾರ: ಏಪ್ರಿಲ್‌ 29ರಿಂದ ಸಿಇಟಿ ಪರೀಕ್ಷೆ ಆರಂಭ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ: ಏಪ್ರಿಲ್‌ 29ರಿಂದ ಸಿಇಟಿ ಪರೀಕ್ಷೆ ಆರಂಭ.

SHARE
 

ಬೆಂಗಳೂರು: ಲೋಕಸಭೆ ಚುನಾವಣಾ ವೇಳಾ ಪಟ್ಟಿ ಬಿಡುಗಡೆ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಏಪ್ರಿಲ್‌ 23, 24 ಮತ್ತು 25ರಂದು ನಿಗದಿಯಾಗಿದ್ದ 2019ನೇ ಸಾಲಿನ ಸಿಇಟಿ ದಿನಾಂಕವನ್ನು ಪರಿಷ್ಕರಿಸಿದ್ದು ಏಪ್ರಿಲ್‌ 29ರಿಂದ ಮೇ 1 ರವರೆಗೆ ನಡೆಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

ಎಂಜಿನಿಯರಿಂಗ್‌ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ(ಸಿಇಟಿ) ಪರೀಕ್ಷೆಯನ್ನು ಈ ಮೊದಲು ಏಪ್ರಿಲ್‌ 23ರಿಂದ 25ರವರೆಗೆ ನಡೆಸಲು ನಿರ್ಧರಿಸಲಾಗಿತ್ತು.

ಆದರೆ ಏಪ್ರಿಲ್ 23ರಂದು ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಇರುವುದರಿಂದ ಯುವ ಮತದಾರರಿಗೆ ಮತದಾನ ಮಾಡಲು ತೊಂದರೆಯಾಗುವ ಹಿನ್ನೆಲೆಯಲ್ಲಿ ವೇಳಾಪಟ್ಟಿ ಪರಿಷ್ಕರಿಸಲಾಗಿದೆ. 2019ನೇ ಸಾಲಿನ ಸಿಇಟಿಗೆ ಒಟ್ಟಾರೆ 2,02,430 ಅರ್ಜಿಗಳು ಬಂದಿವೆ ಎಂದು ವರದಿಯಾಗಿದೆ.