Home Local ಶ್ರೀ ಶ್ರೀ ವೀರೇಶ ಹಿರೇಮಠ ಸ್ವಾಮೀಜಿಯವರಿಗೆ ಗೌರವ.

ಶ್ರೀ ಶ್ರೀ ವೀರೇಶ ಹಿರೇಮಠ ಸ್ವಾಮೀಜಿಯವರಿಗೆ ಗೌರವ.

SHARE
ಪ ಪೂ ಡಾ.  ಶ್ರೀ ಶ್ರೀ ವೀರೇಶ ಹಿರೇಮಠ ಸ್ವಾಮೀಜಿ , ಸಂಸ್ಥಾನ ಹಿರೇಮಠ , ಚಿತ್ರದುರ್ಗ   ಇವರು   ಶ್ರೀ ಕ್ಷೇತ್ರ ಗೋಕರ್ಣದ ಶ್ರೀ  ಮಹಾಬಲೇಶ್ವರ ದೇವಾಲಯದಲ್ಲಿ  ಜರುಗುತ್ತಿರುವ  “ಗೋಕರ್ಣ ಗೌರವ”  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು. ವೀರಶೈವಾಗಮ ಪ್ರಾಧ್ಯಾಪಕರಾಗಿರುವ ಸ್ವಾಮೀಜಿಯವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಗೌರವ ಡಾಕ್ಟರೇಟ್ ಪಡೆದಿರುತ್ತಾರೆ . 
 ಉಪಾಧಿವಂತ ಮಂಡಳದ ಸದಸ್ಯ ವೇ ಸುಬ್ರಹ್ಮಣ್ಯ ಚಿತ್ರಿಗೆಮಠ  ಇವರು  ದೇವಾಲಯದ  ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವಿಸಿದರು .  ಉಪಾಧಿವಂತ ಮಂಡಳದ  ಸದಸ್ಯರು ಉಪಸ್ಥಿತರಿದ್ದರು . ವೇ ವಿಶ್ವನಾಥ ಭಟ್ ಪೂಜೆ ಕೈಂಕರ್ಯ ನೆರವೇರಿಸಿದರು .